ನ್ಯಾಯಾಂಗ ನಿಂದನೆ ; ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್

Supremecourt

ನವದೆಹಲಿ : ನ್ಯಾಯಾಲಯದ(Court) ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ವಿಜಯ ಮಲ್ಯಗೆ(Vijay Malya) ನಾಲ್ಕು ತಿಂಗಳ ಜೈಲು ಶಿಕ್ಷೆ(Imprisonment) ಮತ್ತು ಎರಡು ಸಾವಿರ ರೂ. ದಂಡವನ್ನು ವಿಧಿಸಿ ಸುಪ್ರೀಂಕೋರ್ಟ್‌(Supremecourt) ತೀರ್ಪು(Verdict) ನೀಡಿದೆ.


ವಿಜಯ ಮಲ್ಯ ತನ್ನ ಆಸ್ತಿಗಳನ್ನು ನ್ಯಾಯಾಲಯದ ಆದೇಶವಿಲ್ಲದೇ, ಮಕ್ಕಳು ಸೇರಿದಂತೆ ಯಾರಿಗೂ ಹಸ್ತಾಂತರ ಮಾಡದಂತೆ ಸುಪ್ರೀಂಕೋರ್ಟ್‌ ಈ ಹಿಂದೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಉಲ್ಲಂಘನೆ ಮಾಡಿ, ವಿಜಯ ಮಲ್ಯ ತನ್ನ ಕುಟುಂಬ ಸದಸ್ಯರಿಗೆ ೪೦ ಮಿಲಿಯನ್‌ ಡಾಲರ್‌ ಹಣವನ್ನು ವರ್ಗಾವಣೆ ಮಾಡಿದ್ದನು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್. ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ವಿಜಯ ಮಲ್ಯಗೆ ಖುದ್ದು ಹಾಜರಾತಿ ಅಥವಾ ವಕೀಲರ ಮೂಲಕ ಹಾಜರಾಗಲು ಹಲವು ಅವಕಾಶಗಳನ್ನು ನೀಡಲಾಗಿತ್ತು.

ಕಳೆದ ನವೆಂಬರ್ 30 ರಂದು ನಿರ್ದಿಷ್ಟ ನಿರ್ದೇಶನಗಳನ್ನು ನ್ಯಾಯಪೀಠ ನೀಡಿತ್ತು. ಇನ್ನು ಹಿರಿಯ ವಕೀಲ ಜೈದೀಪ್ ಗುಪ್ತಾ ಅವರ ವಾದಗಳನ್ನು ಆಲಿಸಿದ ನ್ಯಾಯಪೀಠ, ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ವಿಜಯ ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ನಿರ್ಧರಿಸಿತು. ಆದರೆ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸಲಿಲ್ಲ. ಹೀಗಾಗಿ ವಿಜಯ ಮಲ್ಯ ಅವರನ್ನು `ಅವಹೇಳನದ ಅಪರಾಧಿʼ ಎಂದು ಪರಿಗಣಿಸಲಾಯಿತು. ಇನ್ನು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ, ಪ್ರಕರಣವೂ ‘ಡೆಡ್ ವಾಲ್’ ನ್ನು ತಲುಪಿದೆ ಎಂದು ಆದೇಶವನ್ನು ಕಾಯ್ದಿರಿಸಲಾಗಿತ್ತು.

ಈ ಪ್ರಕರಣದಲ್ಲಿ ವಿಜಯ ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ. ಹೀಗಾಗಿ ನಾಲ್ಕು ತಿಂಗಳ ಶಿಕ್ಷೆ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ನ ನ್ಯಾಯಪೀಠ ಹೇಳಿದೆ. ಇನ್ನು ಉದ್ಯಮಿ ವಿಜಯ ಮಲ್ಯ 2016 ರಲ್ಲಿ ಭಾರತದಿಂದ ಪರಾರಿಯಾಗಿ ಇಂಗ್ಲೆಂಡಿನಲ್ಲಿದ್ದಾರೆ. ಅಲ್ಲಿಯೂ ಹಸ್ತಾಂತರ ವಾರಂಟ್ನ ಹಿನ್ನೆಲೆಯಲ್ಲಿ, ಜಾಮೀನು ಪಡೆದುಕೊಂಡಿದ್ದಾರೆ.

Exit mobile version