ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ : ವಿಜಯೇಂದ್ರರನ್ನು ಬಿಜೆಪಿ ಕಣಕ್ಕಿಳಿಸಿದ್ರೆ ಏನಾಗಲಿದೆ ಪರಿಣಾಮ..?!

Bengaluru : 2023ರ ವಿಧಾನಸಭಾ ಚುನಾವಣೆಗಾಗಿ (Assembly Election) ಕಾಂಗ್ರೆಸ್‌ (Congress) ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕಳೆದ ಅನೇಕ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ (vijayendra Vs siddaramaiah) ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲಕ್ಕೆ ಇದೀಗ ಅಂತಿಮ ತೆರೆಬಿದ್ದಿದೆ.

ಸಾಕಷ್ಟು ಅಳೆದು-ತೂಗಿ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ (B. Y. Vijayendra) ಅವರು ಕೂಡಾ ವರುಣಾದಿಂದಲೇ ಸ್ಪರ್ಧೆ ಮಾಡಲು ಒಲವು ತೋರಿದ್ದರು.

ಸಿದ್ದರಾಮಯ್ಯ (Siddaramaiah) ಬಾದಾಮಿಗೆ ಶಿಫ್ಟ್‌ ಆದ ನಂತರ ವಿಜಯೇಂದ್ರ ವರುಣಾದಿಂದ (Varuna) ಹಿಂದೆ ಸರಿದಿದ್ದರು.

ಆದರೆ ಈ ಬಾರಿ ಮತ್ತೇ ವಿಜಯೇಂದ್ರ ವರುಣಾದಿಂದ ಸ್ಪರ್ಧೆಗೆ ಮುಂದಾದರೆ ಏನಾಗಬಹುದು ಎಂಬ ರಾಜಕೀಯ ಲೆಕ್ಕಾಚಾರವು ಗರಿಗೇದರಿದೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮತಗಳು ಅಧಿಕ ಸಂಖ್ಯೆಯಲ್ಲಿವೆ.

ಇದನ್ನೂ ಓದಿ : https://vijayatimes.com/congress-candidates-list-released/

ಹೀಗಾಗಿಯೇ ಬಿಜೆಪಿ (BJP) ಈ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡಿದರೆ, ಗೆಲ್ಲುವ ಸಾಧ್ಯತೆ ಹೆಚ್ಚು.

ಕಳೆದ ಬಾರಿ ಕೇವಲ 10-15 ದಿನಗಳ ಪ್ರಚಾರದಲ್ಲಿಯೇ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸಾಕಷ್ಟು ಪ್ರಭಾವ ಉಂಟು ಮಾಡಿದ್ದರು.

ಲಿಂಗಾಯತ ಸಮುದಾಯ ವಿಜಯೇಂದ್ರ ಬೆನ್ನಿಗೆ ನಿಂತರೇ, ಒಕ್ಕಲಿಗ ಸಮುದಾಯ ಸಿದ್ದರಾಮಯ್ಯರಿಂದ ದೂರ ಸರಿದರೆ,

ಸಿದ್ದರಾಮಯ್ಯ ಮತ್ತು ವಿಜಯೇಂದ್ರ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಇದೀಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡುತ್ತಾರೆ (vijayendra Vs siddaramaiah) ಎನ್ನುವುದು ಖಚಿತವಾಗಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ವರುಣಾದಿಂದ ವಿಜಯೇಂದ್ರರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿಜೆಪಿ-ಜೆಡಿಎಸ್‌ (JDS) ಒಳ ಒಪ್ಪಂದದ ಮೂಲಕ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಿದರೆ, ಸಿದ್ದರಾಮಯ್ಯನವರಿಗೆ ಗೆಲುವು ಅಷ್ಟು ಸುಲಭವಲ್ಲ.

ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಒಂದಾದರೆ ಸಿದ್ದರಾಮಯ್ಯನವರಿಗೆ ಗೆಲುವು ಕಷ್ಟವಾಗಲಿದೆ. ವರುಣಾದಲ್ಲಿ ಜೆಡಿಎಸ್‌ ಕೂಡಾ ಪ್ರಬಲವಾದ ನೆಲೆ ಹೊಂದಿದೆ. ಹೀಗಾಗಿ ಜೆಡಿಎಸ್‌ ತಟಸ್ಥವಾಗಿ ಉಳಿದರೆ ಮಾತ್ರ ಅದರ ಲಾಭ ಬಿಜೆಪಿಗೆ ಆಗಲಿದೆ. ಬಿಜೆಪಿ ಮತ್ತು ಜೆಡಿಎಸ್‌ ಒಂದಾದರೆ ಮಾತ್ರ ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ನೇರ ಸ್ಪರ್ಧೆ ನೀಡಬಹುದು. ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಸಿದ್ದರಾಮಯ್ಯನವರಿಗೆ ಗೆಲುವು ಸುಲಭ.

Exit mobile version