ಎಲ್ಲೆಡೆ ಭಾರಿ ವೈರಲ್ ಆಗುತ್ತಿರುವ ರಾಮಲಲ್ಲಾ ಮೂರ್ತಿ ನಿಜವಾದುದಲ್ಲ: ಅಯೋಧ್ಯೆಯ ಅರ್ಚಕ ಸತ್ಯೇಂದ್ರ ದಾಸ್ ಸ್ಪಷ್ಟೀಕರಣ

Ayodhya: ಅಯೋಧ್ಯೆಯ (Viral Rama Idol Photos Fake) ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿಯಿರುವ ಬೆನ್ನಲ್ಲೇ, ಗರ್ಭಗುಡಿಯಲ್ಲಿ ಸ್ಥಾಪಿಸಿರುವ ಬಾಲರಾಮ ಅಥವಾ

ರಾಮಲಲ್ಲಾನ ಮೂರ್ತಿ ಎನ್ನಲಾದ ವಿಗ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral) ಆಗುತ್ತಿದ್ದು, ಆದರೆ ಇದು ನಿಜವಾದ ಫೋಟೊ ಅಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ

ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಹೇಳಿದ್ದಾರೆ.

ರಾಮ ಮೂರ್ತಿಯದ್ದು ಎನ್ನಲಾದ ಫೋಟೊ (Photo) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಅವರು ಈ ಸ್ಪಷ್ಟೀಕರಣ ನೀಡಿದ್ದು, ರಾಮಲಲ್ಲಾ ಮೂರ್ತಿಯ ಚಿತ್ರ ಹೇಗೆ

ಸೋರಿಕೆಯಾಯಿತು ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮುನ್ನ ಮುಚ್ಚಿರುವ ಬಾಲರಾಮ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ.

ಶ್ರೀರಾಮನ (Shree Rama) ಕಣ್ಣುಗಳು ಕಾಣುವ, ವೈರಲ್ ಆಗಿರುವ ವಿಗ್ರಹವು (Viral Rama Idol Photos Fake) ನಿಜವಾದುಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಶ್ರೀರಾಮನ ಕಣ್ಣುಗಳು ಕಾಣುವ ವೈರಲ್ ಆಗಿರುವ ವಿಗ್ರಹವು ನಿಜವಾದುಲ್ಲ. ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮುನ್ನ ಮುಚ್ಚಿರುವ ಬಾಲರಾಮ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ. ಮೂರ್ತಿಯ

ಕಣ್ಣುಗಳು ಕಾಣುವಂಥ ಫೋಟೊ ಬಹಿರಂಗವಾಗಿದ್ದೇ ಹೌದಾದರೆ ಯಾರಿಂದ ಆಯಿತು ಎಂಬುದರ ಕುರಿತು ತನಿಖೆಯಾಗಬೇಕು. ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದನ್ನು

ಪತ್ತೆ ಮಾಡಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.

ಇನ್ನೂ ವಿಗ್ರಹವನ್ನು ಬಹಿರಂಗಪಡಿಸಿಲ್ಲ. ಬಾಲರಾಮನ ಮೂರ್ತಿಯನ್ನು (Balarama Idol) ಬಟ್ಟೆಯಿಂದ ಮುಚ್ಚಲಾಗಿದೆ. ಅಂತಿಮಗೊಳಿಸಲಾಗಿರುವ ಬಾಲರಾಮನ ಮೂರ್ತಿಯನ್ನು ಬಟ್ಟೆಯಿಂದ

ಮುಚ್ಚಲಾಗಿದೆ. ಮತ್ತು ಅಯೋಧ್ಯೆಯ ಬಾಲ ರಾಮನದ್ದು ಎನ್ನಲಾದ ಚಿತ್ರಗಳು ಶುಕ್ರವಾರ ಸಂಜೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ವಿಐಪಿಗಳು ಹಂಚಿಕೊಂಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮತ್ತು ಟ್ರಸ್ಟ್‌ನ ಪದಾಧಿಕಾರಿಗಳು ಚಿತ್ರ ಬಿಡುಗಡೆ ಮಾಡಲು ನಿರಾಕರಿಸಿದ್ದರು. ಆದಾಗ್ಯೂ, ಚಿತ್ರ ವೈರಲ್ ಆಗಿದೆ.

ದೇವಾಲಯದೊಳಗೆ ವಿಗ್ರಹವನ್ನು ಇರಿಸುವ ಕೆಲವು ದಿನಗಳ ಮೊದಲು ಚಿತ್ರಗಳನ್ನು ತೆಗೆದಿರಬಹುದು ಮತ್ತು ಅದನ್ನು ಈಗ ಪ್ರಸಾರ ಮಾಡಲಾಗುತ್ತಿದೆ ಎಂದು ವಿಎಚ್‌ಪಿ (VHP) ನಾಯಕರು ಅನುಮಾನ

ವ್ಯಕ್ತಪಡಿಸಿದ್ದು, ಸಂಪೂರ್ಣ ಮೂರ್ತಿಯ ಮೊದಲ ಚಿತ್ರ ಜನವರಿ (January) 22 ರಂದು ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ರಾಮಮಂದಿರ ಕಾರ್ಯಕ್ರಮಕ್ಕೆ ಹೋಗದಿರುವ ಪಕ್ಷದ ನಿಲುವಿನಿಂದ ಅಸಮಾಧಾನಗೊಂಡು ಗುಜರಾತ್ ಕಾಂಗ್ರೆಸ್ ಶಾಸಕ ರಾಜೀನಾಮೆ

Exit mobile version