ಇಂದಿನಿಂದ ಅಮರನಾಥ ದೇಗುಲದಲ್ಲಿ ವರ್ಚ್ಯುವಲ್ ದರ್ಶನ, ಆರತಿ ಪ್ರಾರಂಭ

ಶ್ರೀನಗರ,ಜೂ.28: ಕೊರೊನಾ ಕಾರಣದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಂಡಿದ್ದು, ಆನ್​ಲೈನ್​ನಲ್ಲಿ ದೇವರ ದರ್ಶನ ಪಡೆದು, ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಗಿದೆ.

ಆನ್​ಲೈನ್ ಆರತಿ ಜೂ.28ರಿಂದ ಆಗಸ್ಟ್​ 22ರವರೆಗೆ ದಿನದಲ್ಲಿ ಒಂದು ತಾಸು ನಡೆಯಲಿದೆ. ಮುಂಜಾನೆ 6ರಿಂದ 6.30ರವರೆಗೆ ಮತ್ತು ಸಂಜೆ 5.30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇದು ಶ್ರೀ ಅಮರನಾಥ್​ ಜಿ ವೆಬ್​ಸೈಟ್​, ಆ್ಯಪ್​ ಮತ್ತು ಎಂಎಚ್​ 1 ಪ್ರೈಮ್​​ನಲ್ಲಿ ನೇರಪ್ರಸಾರ ಆಗಲಿದೆ.

ಹಿಮಾಲಯದ ಮೇಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಈ ಬಾರಿ ಜೂನ್​ 28ರಿಂದ ಪಹಲ್ಗಾಮ್​ ಮತ್ತು ಬಲ್ಟಾಲ್​ ಮಾರ್ಗದಲ್ಲಿ ಪ್ರಾರಂಭವಾಗಲಿತ್ತು. ಹಾಗೇ ಆಗಸ್ಟ್​22ರಂದು ಮುಕ್ತಾಯಗೊಳ್ಳಬೇಕಿತ್ತು.

Exit mobile version