ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿದ್ದು ಆರ್‌ಎಸ್‌ಎಸ್ ಸಿದ್ಧಾಂತದಿಂದಲ್ಲ:ರಾಹುಲ್ ಗಾಂಧಿ

Wayanad: ಬಿಜೆಪಿ ಮತ್ತು ನರೇಂದ್ರ ಮೋದಿ (Narendra Modi) ಒಂದು ರಾಷ್ಟ್ರ, ಒಂದು ಭಾಷೆ, ಒಂದು ನಾಯಕನನ್ನು ಮಾತ್ರ ನೋಡುತ್ತಾರೆ. ಆದರೆ ಇದೇ ದೇಶದ ಮೂಲಭೂತ ತಪ್ಪು ಗ್ರಹಿಕೆ. ಒಂದೇ ನಾಯಕ ಎನ್ನುವ ಕಲ್ಪನೆ ಯುವ ಸಮುದಾಯಕ್ಕೆ ಅವಮಾನ ಮಾಡಿದಂತಾಗುತ್ತದೆ. ಯಾವುದೇ ವಿಚಾರವನ್ನು ಬಲವಂತದ ಹೇರಿಕೆ ಮಾಡಬಾರದು. ಅದು ವ್ಯಕ್ತಿಯ ಮನಸ್ಸಿನಿಂದ ಬರಬೇಕು.

ಭಾರತ ಹೂಗುಚ್ಛದಂತೆ. ಅದರಲ್ಲಿ ಪ್ರತಿ ಹೂವಿಗೂ ಬೆಲೆ ನೀಡಬೇಕು. ಹಾಗಾಗಿ ಇಲ್ಲಿ ಪ್ರತಿಯೊಬ್ಬರೂ ನಾಯಕರೇ ಎಂದು ವಯನಾಡ್ ಲೋಕಸಭಾ ಕ್ಷೇತ್ರದ (Wayanad Lok Sabha Constituency) ಅಭ್ಯರ್ಥಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿರುವುದು ಸಂಘ ಪರಿವಾರದ ವಸಾಹತುಶಾಹಿ ಸಿದ್ಧಾಂತಕ್ಕೆ ಒಳಗಾಗುವುದಕ್ಕೆ ಅಲ್ಲ ಸ್ವಾತಂತ್ಯ ಮನೋಭಾವದಿಂದ ಆಡಳಿತ ನಡೆಸಲು ಬಿಜೆಪಿ ಓರ್ವ ನಾಯಕ ಎನ್ನುವ ಸಿದ್ಧಾಂತಕ್ಕೆ ಜೋತು ಬಿದ್ದಿದೆ.

ಯಾಕೆ ದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ನಾಯಕರಿರಬಹುದಲ್ಲ.ಒಬ್ಬ ವ್ಯಕ್ತಿ ಒಂದು ಬಾರಿ ಪ್ರಧಾನಿ ಆಗಬಹುದು ಎರಡನೇ ಬಾರಿ ಯುವ ಸಮುದಾಯದವರು ಯಾಕೆ ನಾಯಕರಾಗಬಹುದಲ್ಲ .ಸಾಮಾನ್ಯ ಆಟೋ ಚಾಲಕ ಇಲ್ಲವೇ ಪೊಲೀಸ್ ಅಧಿಕಾರಿಯೋ ಯಾಕೆ ನಾಯಕನಾಗಬಾರದು. ಒಬ್ಬನೇ ವ್ಯಕ್ತಿ ಯಾಕೆ ಪದೇ ಪದೇ ನಾಯಕನಾಗಬೇಕು.ಇದೇ ಬಿಜೆಪಿ ಮತ್ತು ಕಾಂಗ್ರೆಸ್ (Congress)ಗೆ ಇರುವ ವ್ಯತ್ಯಾಸ ಅದನ್ನು ಜನ ಗಮನಿಸಬೇಕು ಎಂದಿದ್ದಾರೆ.

ನಮ್ಮ ಪಕ್ಷ ಪ್ರಜಾಪ್ರಭತ್ವ ಎತ್ತಿ ಹಿಡಿದ ಪಕ್ಷವಾಗಿದ್ದು ಅದು ದೇಶದ ಜನರ ನಂಬಿಕೆಯನ್ನು ಗೌರವಿಸುತ್ತದೆ. ಅವರ ಭಾಷೆ , ಧರ್ಮವನ್ನು ಪ್ರೀತಿಸುತ್ತದೆ. ಹಾಗೂ ಎಲ್ಲ ಜಾತಿ, ಧರ್ಮದ ಜನ ಒಟ್ಟಾಗಿ ಬದುಕಲು ಅನುವು ಮಾಡಿಕೊಡುತ್ತದೆ.ಆದರೆ ಬಿಜೆಪಿ ಬಲವಂತಾಗಿ ತಮ್ಮ ಸಿದ್ಧಾಂತವನ್ನು ಹೇರಲು ಬಯಸುತ್ತದೆ. ಆರ್ ಎಸ್ ಎಸ್ (RSS) ಸಿದ್ಧಾಂತದಿಂದ ದೇಶವನ್ನು ವಸಾಹತುಶಾಹಿಯಾಗಿ ಮಾಡುವುದಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿಲ್ಲ. ಪ್ರತಿಯೊಬ್ಬ ನಾಗರಿಕನು ಭಾರತವನ್ನು ಆಳಬೇಕು. ದುರಾಡಳಿತ ಪ್ರಶ್ನಿಸಬೇಕು.ಯುವ ಜನಾಂಗ ಈ ಕುರಿತಾಗಿ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

Exit mobile version