ವಾಟ್ಸ್ ಆ್ಯಪ್, ಇನ್‌ ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ʻವಾಟ್ಸ್ಯಾಪ್ ಡೌನ್‌ʼ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್

ಹೊಸದಿಲ್ಲಿ ಮಾ 20: ಸಾಮಾಜಿಕ ತಾಣ ವಾಟ್ಸ್ ಆ್ಯಪ್ ಮತ್ತು ಇನ್‌ಸ್ಟಾ ಗ್ರಾಂ ಅಪ್ಲಿಕೇಶನ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಸಮಸ್ಯೆ ಎದುರಾಗಿದೆ.

ಭಾರತ, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಅಪ್ಲಿಕೇಶನ್‌ ಬಳಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಕೆದಾರರು ಟ್ವಿಟರ್‌ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಮಸ್ಯೆ ತಾತ್ಕಾಲಿಕ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಈ ಬಗ್ಗೆ ಸಂಸ್ಥೆಗಳಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಟ್ವಿಟರ್‌ನಲ್ಲಿ ʻವಾಟ್ಸ್ ಆ್ಯಪ್, ಇನ್‌ ಸ್ಟಾಗ್ರಾಂ ಡೌನ್‌ʼ ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

Exit mobile version