ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ವಿವಾದ: ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ

ಬೆಂಗಳೂರು, ಮಾ. 25: ವಾಟ್ಸಾಪ್​ನಲ್ಲಿ ಹೊಸ ಪ್ರೈವಸಿ ಪಾಲಿಸಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾತ್ಮಕ ಆಯೋಗ (Competition Commission of India- CCI) ಆದೇಶಿಸಿದೆ. ವಾಟ್ಸಾಪ್ ಹೊಸ ಪ್ರೈವಸಿ ಪಾಲಿಸಿಯಲ್ಲಿ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಹಾಗಾಗಿ, ವಿವಾದಾತ್ಮಕ ಅಂಶಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಸಿಐ ಆದೇಶ ನೀಡಿದೆ.

ಹೊಸ ಖಾಸಗಿತನದ ನೀತಿಯು, ಮೇಲ್ನೋಟಕ್ಕೆ ಭಾರತದ ಸ್ಪರ್ಧಾ ಕಾಯ್ದೆ 2000ರ ಉಲಂಘನೆಗೆ ಪುಷ್ಟಿ ನೀಡಿರುವುದು ಕಂಡುಬಂದಿರುವ ಹಿನ್ನೆಲೆ ತನಿಖೆ ನಡೆಸಿ 60 ದಿನಗಳಲ್ಲಿ ವರದಿ ಸಲ್ಲಿಸಲು ಡೈರೆಕ್ಟರ್ ಜನರಲ್​ಗೆ ಸೂಚನೆ ನೀಡಿದೆ. ವಾಟ್ಸಾಪ್ ಹೊಸ ಖಾಸಗಿತನದ ನೀತಿಯು ಪಾರದರ್ಶಕವಾಗಿಲ್ಲ, ಬಳಕೆದಾರರ ಒಪ್ಪಿಗೆಯನ್ನು ಪಡೆದಿಲ್ಲ. ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಕಂಪನಿಗಳ ಜೊತೆಗೆ ಹಂಚಿಕೊಳ್ಳುತ್ತದೆ. ಇದು ಕಾಯ್ದೆಯ ಉಲಂಘನೆ ಎಂದು ಸಿಸಿಐ ತಿಳಿಸಿದೆ.

Exit mobile version