ಹುಲಿ ಉಗುರು ಪ್ರಕರಣ : ಏನ್ ಹೇಳುತ್ತೇ ವನ್ಯಜೀವಿ ಕಾಯ್ದೆ? ಶಿಕ್ಷೆ ಎಷ್ಟು ವರ್ಷ?

Bengaluru: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹುಲಿ ಉಗುರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ (Wildlife Protection Act 1972) ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.

ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಅಪರಾಧ ಎನ್ನುವುದರ ಕುರಿತು ಚರ್ಚೆ ಒಂದೆಡೆ ನಡೆಯುತ್ತಿದ್ದರೆ, ಸಾಮಾನ್ಯ ರೈತ ವರ್ತೂರು ಸಂತೋಷ (Varthur Santhosh) ಅವರನ್ನು

ಬಂಧಿಸಿರುವ ಪೊಲೀಸರು, ನಟ ದರ್ಶನ್ (Darshan), ಸಂಸದ ಜಗ್ಗೇಶ್ ಸೇರಿದಂತೆ ಸೆಲೆಬ್ರಿಟಿಗಳನ್ನು ಯಾಕೆ ಇರುವರೆಗೂ ಬಂಧಿಸದೇ ಕೇವಲ ನೋಟಿಸ್ (Notice) ಕೊಟ್ಟಿದ್ದಾರೆ ಎಂಬ ಬಗ್ಗೆಯೂ

ಪರ-ವಿರೋಧ (Wildlife Protection Act 1972) ಚರ್ಚೆ ಶುರುವಾಗಿದೆ.

ನಾವು ವನ್ಯಜೀವಿಗಳ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ಏನಿದು ವನ್ಯಜೀವಿ ಸಂರಕ್ಷಣಾ ಕಾಯ್ದೆ? ಕಾಯ್ದೆಯ ಪ್ರಮುಖಾಂಶಗಳೇನು? ಈ ಕಾಯ್ದೆ ಉಲ್ಲಂಘಿಸಿದವರಿಗೆ

ಶಿಕ್ಷೆ ಏನು ಎನ್ನುವುದರ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಸಾಕುಪ್ರಾಣಿಯಲ್ಲದ ಯಾವುದೇ ಪ್ರಾಣಿಯನ್ನು ವನ್ಯಜೀವಿ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಕೇವಲ ಅರಣ್ಯ ಪ್ರದೇಶದ ಒಳಗಿರುವ

ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೇ, ಅರಣ್ಯದ ಹೊರಗೆ ಇರುವ ಆದರೆ ಸಾಕಾಣಿಕೆಗೆ ಒಳಗಾಗದ ಎಲ್ಲಾ ಪ್ರಾಣಿ-ಪಕ್ಷಿಗಳು ಕೂಡ ವನ್ಯಜೀವಿಗಳೇ.

ಇನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈ ಕಾಯ್ದೆಯ ಪ್ರಕಾರ ವನ್ಯಜೀವಿಗಳನ್ನು ಬೇಟೆಯಾಡುವುದು, ಬಂಧಿಸುವುದು, ಸಾಕುವುದು, ಸಾಗಾಣಿಕೆ ಮಾಡುವುದು,

ಹಿಂಸಿಸುವುದು, ಅಂಗಾಂಗಗಳನ್ನು ಮಾರುವುದು, ಕೊಂಡುಕೊಳ್ಳುವುದು, ಇಟ್ಟುಕೊಳ್ಳುವುದು ಎಲ್ಲವನ್ನೂ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಈ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಗರಿಷ್ಟ 7

ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನೂ ವಿಧಿಸಬಹುದು.

ಇನ್ನು ಹುಲಿಗಳ ಸಂಖ್ಯೆಯಲ್ಲಿ ಮಧ್ಯಪ್ರದೇಶ (Madhya Pradesh) ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, 563 ಹುಲಿಗಳಿರುವ ಕರ್ನಾಟಕ (Karnataka) ಎರಡನೇ ಸ್ಥಾನ ಪಡೆದಿದೆ. ಕರ್ನಾಟಕದ

ಬಂಡಿಪುರ (Bandipura) ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಹುಲಿಗಳಿವೆ.

ಇದನ್ನು ಓದಿ: ವಿದ್ಯಾರ್ಥಿನಿ ಮೇಲೆ ಮುಖ್ಯಶಿಕ್ಷಕನಿಂದ ಆ್ಯಸಿಡ್ ದಾಳಿ: ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲು ಆದೇಶ.

Exit mobile version