`ನನ್ನ ಮಗಳನ್ನು ಹಿಜಾಬ್ ಇಲ್ಲದೇ ಶಾಲೆಗೆ ಕಳಿಸಲ್ಲ’ ಎಂದು ವಾಪಾಸ್ ಮನೆಗೆ ಕರೆದುಕೊಂಡು ಹೋದ ತಂದೆ!

hijab

ಮಂಡ್ಯ ಜಿಲ್ಲೆಯ ಶಾಲೆಯ ಶಿಕ್ಷಕರು ತರಗತಿಯೊಳಗೆ ಹಿಜಾಬ್ ತೆಗೆಯುವಂತೆ ಹೇಳಿದ ಕಾರಣಕ್ಕೆ ತಮ್ಮ ಮಗಳನ್ನು ಹಿಜಾಬ್ ಇಲ್ಲದೇ ಕ್ಲಾಸ್ಗೆ ಕಳಿಸುವುದಿಲ್ಲ ಎಂದು ಶಾಲೆಯಿಂದ ತಂದೆ ಮಗಳನ್ನು ಮನೆಗೆ ವಾಪಾಸ್ ಕರೆದುಕೊಂಡು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಂದು ಹೈಕೋರ್ಟ್ ಮೆಟ್ಟಿಲೇರಿರುವ ಹಿಜಾಬ್ ಪ್ರಕರಣ ಹಲವು ದಿನಗಳಿಂದ ರಾಜ್ಯದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿ ಮಾಡಿದೆ. ಒಂದೆಡೆ ಹಿಜಾಬ್ ಧರಿಸಿಯೇ ನಾವು ವಿದ್ಯಾಭ್ಯಾಸ ಮಾಡುವುದು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟುಹಿಡಿದರೆ, ಮತ್ತೊಂದೆಡೆ ಹಿಂದೂ ವಿದ್ಯಾರ್ಥಿಗಳು ಅವರು ಹಿಜಾಬ್ ಧರಿಸಿ ಬಂದರೆ ನಾವೂ ಕೇಸರಿ ಹಾಕಿಕೊಂಡೆ ಬರುತ್ತೀವಿ ಎಂದು ಪಟ್ಟು ಹಿಡಿದಿದ್ದಾರೆ.

ಈ ಗಲಭೆಗಳು ವಿದ್ಯಾರ್ಥಿಗಳಿಗೆ ತಿಳಿಯುತ್ತಿಲ್ಲ, ತಮ್ಮ ವಿಧ್ಯಾಭ್ಯಾಸಕ್ಕೆ ಈ ಹೋರಾಟಗಳು, ಪ್ರತಿಭಟನೆಗಳು ಅಡ್ಡಿಪಡಿಸುತ್ತಿದೆ ಎಂಬ ಅರಿವು ಅವರಿಗಿಲ್ಲ! ಸದ್ಯ ಈ ವಿಚಾರ ಇಂದು ರಾಷ್ಟ್ರದ ಪ್ರಮುಖ ಸುದ್ದಿಯಾಗಿದ್ದು, ಹೈಕೋರ್ಟ್ ನಲ್ಲಿ ಚರ್ಚೆಯಾಗುತ್ತಿರುವ ಗಾಢ ವಿಷಯವೂ ಕೂಡ ಹಿಜಾಬ್‍ನದ್ದೆ! ಹಿಜಾಬ್ ಪ್ರಕರಣಗಳು ರಾಜ್ಯದ ನಾನಾ ಭಾಗಗಳಲ್ಲಿ ತೀವ್ರ ಮಟ್ಟಕ್ಕೆ ಹೋಗಿದ್ದು, ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ! ಶಾಲೆಗೆ ಬಂದರೆ ತರಗತಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ.

ಈ ನಿಯಮವನ್ನು ಕಡ್ಡಾಯವಾಗಿ ಮಾಡಿಕೊಂಡಿದ್ದಾರೆ. ಇದೇ ರೀತಿ ಮಂಡ್ಯದ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಶಾಲಾ ಶಿಕ್ಷಕರು ಹಿಜಾಬ್ ತರಗತಿಯೊಳಗೆ ಹಾಕುವುದು ಬೇಡ ತೆಗೆದಿಡಿ ಎಂದಿದ್ದಾರೆ. ಈ ಮಾತನ್ನು ವಿರೋಧಿಸಿದ ವಿದ್ಯಾರ್ಥಿನಿಯ ತಂದೆ, ಹಿಜಾಬ್ ತೆಗೆಯಿರಿ ಎಂದರೆ ನನ್ನ ಮಗಳಿಗೆ ಶಾಲೆ ಬೇಡ! ನೀವು ಹಿಜಾಬ್ ಬೇಡ ಅಂದ್ರೆ, ನಮಗೆ ಶಾಲೆಯೇ ಬೇಡ ಎಂದು ಶಾಲೆಯ ಶಿಕ್ಷಕರೊಡನೆ ಮಾತಿಗಿಳಿದ ತಂದೆ ತಮ್ಮ ಮಗಳನ್ನು ಶಾಲೆಯಿಂದ ವಾಪಾಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.

Exit mobile version