ವಿಶ್ವ ಟೆಸ್ಟ್‌ ಚಾಂಪಿನಯನ್ಷಿಪ್ ಫೈನಲ್ ಪಂದ್ಯ: ಜೂನ್ 2ರಂದು ನ್ಯೂಜಿ಼ಲೆಂಡಿಗೆ ಪ್ರಯಾಣ ಬೆಳೆಸಲಿರುವ ಟೀಂ ಇಂಡಿಯಾ

ಹೊಸದಿಲ್ಲಿ, ಮೇ. 28: ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಶುರುವಾಗಿದ್ದು,

ನ್ಯೂಜಿ಼ಲೆಂಡಿನ ಸೌತ್ಹ್ಯಾಂಪ್ಟನ್ ನಲ್ಲಿ ಜೂನ್ 18ರಿಂದ ಆರಂಭವಾಗುವ ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳು ತಯಾರಿ ಆರಂಭಿಸಿವೆ. ಈ ನಡುವೆ ಕೋಹ್ಲಿ ನೇತೃತ್ವದ ಟೀಂ‌ ಇಂಡಿಯಾ ಜೂನ್ 2ರಂದು ನ್ಯೂಜಿಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದೆ.

ಫೈನಲ್ ಪಂದ್ಯಕ್ಕಾಗಿ ಐಸಿಸಿ ವತಿಯಿಂದ ಈಗಾಗಲೇ ಎಲ್ಲಾ ಸಿದ್ಧತೆಗ ಮಾಡಲಾಗುತ್ತಿದೆ. ಪಂದ್ಯದ ದಿನದಾಟದಲ್ಲಿ ಯಾವುದೇ ಅಡ್ಡಿಯಾದಲ್ಲಿ ಹೆಚ್ಚುವರಿ ದಿನವನ್ನು ಸಹ ನಿಗದಿ ಮಾಡಲಾಗಿದ್ದು, ಉಭಯ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಲ್ಲಿ ಜಂಟಿ ವಿಜೇತರನ್ನು ಘೋಷಿಸಲು ಐಸಿಸಿ ತೀರ್ಮಾನಿಸಿದೆ.

ಸೌತಾಂಪ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಾಲ್ಕು ಸಾವಿರ ಪ್ರೇಕ್ಷಕರಿಗೆ ಅವಕಾಶವಿದೆ. ಐಸಿಸಿಯಿಂದ ನೇಮಕಗೊಂಡಿರುವ ಅಧಿಕೃತ ಟಿಕೆಟ್ ಏಜೆಂಟ್ ಕಂಪನಿಗಳ ಪ್ರಕಾರ, ಪ್ರತಿ ವಿಭಾಗದಲ್ಲೂ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ.

Exit mobile version