ಯಶಸ್ವಿನಿ ಆರೋಗ್ಯ ವಿಮಾ ಯೋಜನೆ : ಖಾಸಗಿ ಆಸ್ಪತ್ರೆಗಳ ನಿರಾಸಕ್ತಿ

Karnataka : ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು (Yashasvini Health Insurance Scheme) ಕರ್ನಾಟಕ ರಾಜ್ಯ ಸರ್ಕಾರವು (Karnataka State Govt) ಮರುಜಾರಿಗೊಳಿ ಸಿದೆ. ಆದರೆ, ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ (Yashavini Yojana re implemented) ನೋಂದಣಿ ಮಾಡಿಕೊಂಡು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ.

ಅದರಲ್ಲೂ ಪ್ರಮುಖ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯ ಉಸಾಬರಿಯೇ ಬೇಡ ಎನ್ನುತ್ತಿದ್ದು,

ಇದರಿಂದಾಗಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯುವುದು ಕನಸಿನ ಮಾತಾಗಿಯೇ ಉಳಿದಿದೆ.

ಯಶಸ್ವಿನಿ ಯೋಜನೆಯಲ್ಲಿ ಮೊದಲು ಹೆಸರು ನೋಂದಣಿ ಮಾಡಿಕೊಳ್ಳಬೇಕು, ನೋಂದಣಿಯಾದ 15 ದಿನ ಬಳಿಕ ಸದಸ್ಯರಿಗೆ ಪ್ರತ್ಯೇಕನೋಂದಣಿ ಸಂಖ್ಯೆಯನ್ನು ವಿತರಣೆ ಮಾಡಲಾಗುತ್ತದೆ.

ಆದರೆ ಕಾರ್ಡ್ ವಿತರಣೆಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಆ ಬಳಿಕ ಚಿಕಿತ್ಸೆ ಸಿಗುತ್ತದೆ.

ಒಂದು ವೇಳೆ ಕಾರ್ಡ್ ಇಲ್ಲದಿದ್ದರೂ ವೈಯಕ್ತಿಕ ಸಂಖ್ಯೆ ಕೊಟ್ಟರೂ ಸೌಲಭ್ಯ ಒದಗಿಸಲು ಯಶಸ್ವಿನಿ ಟ್ರಸ್ಟ್‌ (Yashasvini Trust) ನಿರ್ಧರಿಸಿದೆ.

ಆದರ ಚಿಕಿತ್ಸಾ ವೆಚ್ಚ ಕಮ್ಮಿ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ನೆರವೇರಿಲ್ಲ.

ಇದನ್ನೂ ಓದಿ : https://vijayatimes.com/kedarjadhav-entry-for-rcb/

ರಾಜ್ಯ ಸರಕಾರ ನ. 1ರಿಂದ ನಮ್ಮ ರಾಜ್ಯದಲ್ಲಿರುವ ಅನೇಕ ರೈತರು ಮತ್ತು ಬಡವರಿಗಾಗಿ ಈ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಕರ್ನಾಟಕ ಸರ್ಕಾರ ಮರು ಜಾರಿ ಮಾಡಿ ಆದೇಶವನ್ನು ಹೊರಡಿಸಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ (Ayushman Bharat-Health Karnataka Scheme) ನೋಂದಣಿ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆ ಬಗ್ಗೆ ಆಸಕ್ತಿ ತೋರುತ್ತಿಲ್ಲ.

ಆದರೆ, ಈ ಯೋಜನೆಯಡಿ ಚಿಕಿತ್ಸೆ ಒದಗಿಸಲು ಇದುವರೆಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಈ ಸಮಸ್ಯೆಗೆ ಚಿಕಿತ್ಸಾ ವೆಚ್ಚ ಇಳಿಕೆಯೇ ಮುಖ್ಯ ಕಾರಣ :

ಇದಕ್ಕೆ ಮುಖ್ಯ ಕಾರಣ ಯಶಸ್ವಿನಿ ಯೋಜನೆಯಡಿ ವಿವಿಧ ಚಿಕಿತ್ಸೆಗಳಿಗೆ ನಿಗದಿಪಡಿಸಿರುವ ದರ. ಈ ಬಗ್ಗೆ ಖಾಸಗಿ (Yashavini Yojana re implemented) ಆಸ್ಪತ್ರೆಗಳು ತಮ್ಮ ಅಸಮಾಧಾನ ಹೊರಹಾಕಿವೆ.

ಮೊದಲ ಬಾರಿ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯನ್ನು ಆಯು ಸ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದ ಮೇಲೆ 2018ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಇದೀಗ ಮತ್ತೆ ಜಾರಿ ಮಾಡಲಾಗಿದೆಯಾದರೂ 2017-18ನೇ ಸಾಲಿನಲ್ಲಿ ಇದ್ದ ಚಿಕಿತ್ಸಾ ದರಕ್ಕಿಂತ ಶೇ. 10ರಿಂದ 20ರಷ್ಟು ಕಡಿಮೆ ಮಾಡಲಾಗಿದೆ.

ಈ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ನೀಡಲು ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ.

ಈ ಯೋಜನೆಯಡಿ ಸುಮಾರು 1,600 ವಿಧದ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಎಲ್ಲಾ ಚಿಕಿತ್ಸೆಗಳ ವೆಚ್ಚವೂ ಏರಿಕೆಯಾಗಿದೆ. ಆದ್ದರಿಂ ದ ಯಶಸ್ವಿನಿ ಯೋಜನೆಯಡಿ ನಿಗದಿಪಡಿಸಿರುವ ಚಿಕಿತ್ಸಾ ವೆಚ್ಚ ಏರಿಸಬೇಕು.

ಸರಕಾರ ವೈಜ್ಞಾನಿಕ ದರ ನಿಗದಿ ಮಾಡಬೇಕು ಎಂಬುದು ಖಾಸಗಿ ಆಸ್ಪತ್ರೆಗಳ ಒತ್ತಾಯ.

ಇದು ವಿಶ್ವದ ಬೃಹತ್ ಯೋಜನೆಯಾಗಿತ್ತು :


ಮೊದಲು 2003 ರಲ್ಲಿ ಯಶಸ್ವಿನಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರಕಾರವು ಆರಂಭಿಸಿತ್ತು. ಕೇವಲ 300 ರು.

ಹಣದಲ್ಲಿ ಅನೇಕ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಯಶಸ್ವಿನಿ ಯೋಜನೆಯು,

ವಿಶ್ವದ ಅತ್ಯಂತ ಬೃಹತ್ ಆರೋಗ್ಯ ರಕ್ಷಣಾ ಯೋಜನೆ ಎಂಬ ಖ್ಯಾತಿಯನ್ನು ಕೂಡ ಹೊಂದಿತ್ತು.

ಇದನ್ನೂ ಓದಿ : https://vijayatimes.com/somanna-vs-puttarangashetty/

ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಯೋಜನೆ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸಿದ್ದವು. ಅಷ್ಟೇ ಅಲ್ಲದೆ ಫಿಲಿಪ್ಪಿನ್ಸ್ ದೇಶದ (Philippines country) ವಿವಿಗಳಲ್ಲಿ

ಈ ‘ಯಶಸ್ವಿನಿ’ ಯೋಜನೆ ಬಗ್ಗೆ ಪ್ರಬಂಧ ಕೂಡ ಮಂಡನೆಯಾಗಿತ್ತು.

ಈ ಯೋಜನೆಯಡಿ ರಾಜ್ಯದಲ್ಲಿ 2018ವರೆಗೆ 13.64 ಲಕ್ಷ ರೈತರಿಗೆ 1700 ಕೋಟಿ ರು. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಹಾಗೂ 24.48 ಲಕ್ಷ ಹೊರರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿತ್ತು.

ಸರಕಾರ ವೈಜ್ಞಾನಿಕ ದರ ನಿಗದಿಪಡಿಸದಿದ್ದರೆ ಗುಣಮಟ್ಟದ ಆರೋಗ್ಯ ಸೇವೆ ಸಿಗದಂತಾಗಬಹುದು.

ಕೆಲವೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಸ್ಪತ್ರೆಗಳು ನಿರಾಕರಿಸುವ ಸಾಧ್ಯತೆ ಇದೆ. ಈ ಕಡಿಮೆ ಪ್ಯಾಕೇಜ್‌ನಿಂದಾಗಿ ಕೆಲವು ಆಸ್ಪತ್ರೆಗಳು ಬೇಕಂತಲೇ ಉದ್ದೇಶಪೂರ್ವಕವಾಗಿಯೇ ಚಿಕಿತ್ಸೆ ವಿಳಂಬ ಮಾಡಬಹುದು,

ಇದನ್ನೂ ಓದಿ : https://vijayatimes.com/whatsapp-accounts-are-banned/

ಇದರಿಂದ ರೋಗಿಗಳಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದೆ. ಚಿಕಿತ್ಸಾ ವೆಚ್ಚದ ರೂಪದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದ್ದು, ಸರಿಯಾದ ಚಿಕಿತ್ಸೆಸಿಗದಿದ್ದರೆ, ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಟ್ಟರೆ ಆಸ್ಪತ್ರೆಗಳ ಜತೆ ಜನ ಜಗಳವಾಡುವ ಪರಿಸ್ಥಿತಿಯು ಬರಬಹುದು.

Exit mobile version