“ನಾನು ನೀಡಿದ ಲಿಸ್ಟ್ನಲ್ಲಿದ್ದವರ ಕೆಲಸ ಮಾತ್ರ ಆಗ್ಬೇಕು” ಸಿಎಂ ಪುತ್ರನ ದರ್ಬಾರ್ ; ಕಳಚಿತು ಸಮಾಜವಾದದ ಮುಖವಾಡ

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah Video Viral) ಬಹಿರಂಗವಾಗಿ ಪೋನ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಗೂ ಅವರ ಸಹಾಯಕರಿಗೆ ವರ್ಗಾವಣೆ ಕುರಿತು ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ (Video Viral) ಆಗುತ್ತಿದ್ದಂತೆ ಸಮಾಜವಾದಿ ಸಿದ್ದರಾಮಯ್ಯನವರ ಮುಖವಾಡ ಕಳಚಿ ಬಿದ್ದಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಕೇಳಿ ಬರುತ್ತಿದ್ದ (Yathindra Siddaramaiah Video Viral) ವರ್ಗಾವಣೆಯ ದಂಧೆಯ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ನೇರವಾಗಿ ಕರೆ ಮಾಡಿ “ನಾನು ನೀಡಿರುವ ಲಿಸ್ಟ್ನಲ್ಲಿದ್ದವರ ಕೆಲಸ ಮಾತ್ರ ಆಗಬೇಕು” ಎಂದು ಸೂಚನೆ ನೀಡಿ ಆಡಳಿತದಲ್ಲಿ ಹಸ್ತಕ್ಷೇಪ

ಮಾಡಿದ್ದಾರೆ. ಸಿಎಂ ಪುತ್ರನ ಈ ದರ್ಬಾರ್ಗೆ ಇಡೀ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಿಂದಲೇ ವರ್ಗಾವಣೆ ದಂಧೆ ನಡೆಯುತ್ತಿದೆ, ಸಿದ್ದರಾಮಯ್ಯನವರ

ಪುತ್ರ ಯತೀಂದ್ರ ಸಿದ್ದರಾಮಯ್ಯ ಇದೆಲ್ಲದರ ಹಿಂದಿರುವ ಶ್ಯಾಡೋ ಸಿಎಂ (Shadow CM) ಎಂಬ ಆರೋಪ ಕೇಳಿ ಬಂದಿದೆ.

ಸಮಾಜವಾದದ ಹಿನ್ನಲೆಯ ಸಿದ್ದರಾಮಯ್ಯನವರ ಈ ಆರೋಪಕ್ಕೆ ಸ್ಪಷ್ಟನೆ ನೀಡಬೇಕಿದೆ. ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಯವರೆಗೂ

ಇದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ (BJP), ಸಿಎಂ ಗಿಂತಲೂ ಪವರ್ ಫುಲ್ ಈ ಶ್ಯಾಡೋ ಸಿಎಂ.

ಅಪ್ಪ ನಾನು ಕೊಟ್ಟಿರೋದನ್ನು ಮಾತ್ರ ಮಾಡಬೇಕು ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ ಎನ್ನುವ ಕಟ್ಟಾಜ್ಞೆಯನ್ನು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರಿಗೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ನಾಮಕಾವಸ್ಥೆ ಮಾತ್ರ ಅಧಿಕಾರ ಆಡಳಿತ ಎಲ್ಲವೂ ಪುತ್ರ ಯತೀಂದ್ರ ಅವರದ್ದು ಎನ್ನುವುದಕ್ಕೆ ಇದಕ್ಕಿಂತಲೂ

ಉದಾಹರಣೆ ಸಿಗಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇದೆ ಎಂದು ಟ್ವೀಟ್ (Tweet) ಮಾಡಿದೆ.

ಇದನ್ನು ಓದಿ: “ನಾನು ನೀಡಿದ ಲಿಸ್ಟ್ನಲ್ಲಿದ್ದವರ ಕೆಲಸ ಮಾತ್ರ ಆಗ್ಬೇಕು” ಸಿಎಂ ಪುತ್ರನ ದರ್ಬಾರ್ ; ಕಳಚಿತು ಸಮಾಜವಾದದ ಮುಖವಾಡ

Exit mobile version