ಅಗ್ನಿವೀರರಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ : ಯೋಗಿ ಘೋಷಣೆ!

UP

ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ(Central Government) ಜಾರಿಗೆ ತರಲು ಉದ್ದೇಶಿಸಿರುವ ‘ಅಗ್ನಿಪಥ್’ ಯೋಜನೆಯನ್ನು(Agnipath Yojana) ವಿರೋಧಿಸಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಆದರೆ ಇದೀಗ ಉತ್ತರಪ್ರದೇಶ(Uttarpradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು, ಅಗ್ನಿವೀರರು ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ನಂತರ ಉತ್ತರಪ್ರದೇಶದ ಪೊಲೀಸ್ ಮತ್ತು ಇತರೆ ಟಾಸ್ಕ್ ಪೋರ್ಸ್‍ಗಳಲ್ಲಿ ಅಗ್ನಿವೀರರನ್ನು(Agniveer) ನೇಮಕಾತಿ(Recruitement) ಮಾಡಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಯುವಕರಲ್ಲಿ ಸೇವಾ ಮನೋಭಾವ ಮತ್ತು ಉತ್ತಮ ಸಾಮಾಜಿಕ ಹೊಣೆಗಾರಿಕೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. 17.5 ವರ್ಷದಿಂದ 23 ವರ್ಷದೊಳಗಿನ ಯುವಕರಿಗೆ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಂತರ ಶೇ.25ರಷ್ಟು ಯುವಕರನ್ನು ಪೂರ್ಣಾವಧಿ ಸೇವೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಅಗ್ನಿವೀರರಿಗೆ ಉತ್ತಮ ವೇತನ, ಭತ್ಯೆ, ವಿಮೆ, ಪದವಿ ಮಾಡಲು ಅವಕಾಶ, ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತದೆ. ಆದರೆ ಈ ಯೋಜನೆಯಿಂದ ಹಲವು ಉದ್ಯೋಗಗಳು ಕಡಿತವಾಗಲಿದೆ.

ಅದೇ ರೀತಿ ನಾಲ್ಕು ವರ್ಷಗಳ ನಂತರ ಮತ್ತೆ ನಾವು ಏನು ಮಾಡಬೇಕು..? ಈ ಯೋಜನೆಯಲ್ಲಿ ನಮಗೆ ಸೇವಾ ಭದ್ರತೆ ಸಿಗುವುದಿಲ್ಲ ಎಂದು ಕೆಲ ರಾಜ್ಯಗಳಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಕರ್ನಾಟಕ(Karnataka) ರಾಜ್ಯ ಸರ್ಕಾರವೂ(State Government) ಕೂಡಾ ಅಗ್ನಿವೀರರನ್ನು ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ. ದೇಶ ಸೇವೆ ಸಲ್ಲಿಸಿ, ಉತ್ತಮ ತರಭೇತಿ ಪಡೆದುಕೊಂಡಿರುವ ಯುವಕರಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡುವುದರಿಂದ ಪೊಲೀಸ್ ಪಡೆ ಮತ್ತಷ್ಟು ಬಲಗೊಳ್ಳಲಿದೆ.

ಹೀಗಾಗಿ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ(Home Minsiter) ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ.

Exit mobile version