ಯುವಿ ಫ್ಯಾನ್ಸ್ಗೆ ಸಿಹಿ ಸುದ್ದಿ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಕ್ರಿಕೆಟ್ ಲೋಕಕ್ಕೆ ಮತ್ತೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಪಿಚ್​ಗೆ ಹಿಂತಿರುಗುತ್ತಿದ್ದೇನೆ ಎಂದು ತಿಳಿದು ಬಂದಿದೆ.ಸಿಕ್ಸರ್‌ ಸಿಂಗ್‌ ಈ ಬಗ್ಗೆ ತಮ್ಮ instagram ಖಾತೆಯಲ್ಲಿ ತಿಳಿಸಿದ್ದಾರೆ.

ಯುವರಾಜ್‌ ಸಿಂಗ್‌ರವರು 1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಶ್ವಕಪ್ ಹೀರೋ ಆಗಿ, ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ.

2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲ್ಲುವಲ್ಲಿ ಯುವರಾಜ್‌ ಸಿಂಗ್‌ ಪಾತ್ರ ಮುಖ್ಯವಾಗಿತ್ತು. ಆದರೆ,ತದ ನಂತರ ಕ್ಯಾನ್ಸರ್‌ ಕಾರಣದಿಂದ ಯುವಿ ಆಟ ಮಂಕಾಯಿತು. ಅವರು 2011ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಚಿಕಿತ್ಸೆಪಡೆದುಕೊಂಡು 2012ರಲ್ಲಿ ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಮರಳಿದರು. ಆದರೆ ಅವರು ಹಿಂದಿನ ಪ್ರದರ್ಶನವನ್ನು ಕೊಡುವುದರಲ್ಳಿ ವಿಫಲರಾದರು.

ಕ್ಯಾನ್ಸರ್​ನಿಂದ ಚೇತರಿಸಿಕೊಂಡು ಸ್ವಲ್ಫ ಸಮಯ ಕ್ರಿಕೆಟ್ ಆಡಿದರೂ ಮೊದಲಿನಂತೆ  ಇರಲಿಲ್ಲ ,ಬಳಿಕ ಇವರನ್ನು ತಂಡದಿಂದ ಕೈಬಿಡಲಾಯಿತು. ಕೊನೆಯದಾಗಿ ಯುವರಾಜ್ ಸಿಂಗ್‌ 2019ರ ಜೂನ್​ನಲ್ಲಿ  ಕ್ರಿಕೆಟ್​ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಸದ್ಯ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Exit mobile version