ಬೆಂಗಳೂರು: ಇಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲರ ಪ್ರೀತಿಯ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕೊಡಲಾಗಿದೆ ,ಹೌದು ಅಪ್ಪು ಅವರ ಅಭಿನಯದ ಜೇಮ್ಸ್ ಚಿತ್ರದ ಪೋಸ್ಟರನ್ನು ಇಂದು ಬಿಡುಗಡೆ ಮಾಡಲಾಗಿದೆ .ಪೋಸ್ಟರ್ ನೋಡಿದ ಅಭಿಮಾನಿಗಳು ಟೀಸರ್ ಹಾಗೂ ಟ್ರೇಲರ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.ಸದ್ಯಕ್ಕೆ ಜೇಮ್ಸ್ ಸಿನೆಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವುದರಿಂದ ಟೀಸರ್ ಮತ್ತು ಟ್ರೇಲರ್ ಬಗ್ಗೆ ಮಾಹಿತಿ ಕೊಟ್ಟಿಲ್ಲ
ಇನ್ನು ಜೇಮ್ಸ್ ಚಿತ್ರದ ನಿರ್ದೇಶಕರಾದ ಚೇತನ್ ಕುಮಾರ್ ಅವರು “ಪುನೀತ್ ರಾಜಕುಮಾರ್ ಅವರ ನೆನಪು ನೆನಪುಗಳನ್ನು ಮರೆಯಲು ಸಾಧ್ಯವೇ ಇಲ್ಲ ,ಪ್ರತಿದಿನವು ಅವರನ್ನು ನೆನೆಸಿಕೊಂಡಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ . ಚಿತ್ರದ ಕೆಲವು ದೃಶ್ಯಗಳಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ “ಎಂದು ಹೇಳಿಕೊಂಡಿದ್ದಾರೆ