ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆ ಹಾಗೂ ಅವರಿಗೆ ಸೇರಿದ14 ಸ್ಥಳಗಳ ಮೇಲೆ ಆಸ್ತಿ ಗೆ ಸಂಬಂಧಿಸಿ ಸಿಬಿಐ ತಂಡ ತನಿಖೆ ನಡೆಸಿದ್ದು ಡಿಕೆಶಿ ವಿರುದ್ಧ ಎಫ್ ಐ ಆರ್ ದಾಖಲಿಸಿದೆ. ಸಮನ್ಸ್ ನೀಡಿ 2 ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದೆ.
ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಸದಾಶಿವ ನಗರ ಮತ್ತು ಕೋಡಿ ಹಳ್ಳಿಗಳಲ್ಲಿರುವ ಮನೆಗಳ ಮೇಲೆ ಸಿಬಿಐ ರೇಡ್ ಆಗಿದ್ದು ಇ.ಡಿ ವಿಚಾರಣೆ ಬಳಿಕ ಡಿಕೆ ಶಿ ಗೆ ಕಂಟಕ ಎದುರಾಗಿದೆ. ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳು ಡಿಕೆಶಿ ಮನೆಯಿಂದ ಹಲವಾರು ದಾಖಲೆ ಸಹಿತ ಮಗಳ ಮದುವೆಗೆಂದು ಮಾಡಿಟ್ಟ ಚಿನ್ನಾಭರಣ ಹಾಗೂ 50 ಲಕ್ಷರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಡಿಕೆ ಶಿ ಅವರು 1-4-2013ರಿಂದ 30-4-2018 ರ ಅವಧಿಯಲ್ಲಿ ಕ್ಯಾಬಿನಟ್ ಸಚಿವರಾಗಿದ್ದು ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರ ಆದಾಯ 33.92 ಕೋಟಿ ರೂಪಾಯಿಗಳಿಂದ 128.60 ಕೋಟಿ ರೂ ಗಳಿಗೆ ಏರಿಕೆಯಾಗಿದೆ. ಡಿಕೆಶಿ ಆಸ್ಥಿ ಮೌಲ್ಯ 128.60 ಕೋಟಿಗೂ ಹೆಚ್ಚಳವಾಗಿದ್ದು, ಕುಟುಂಬದ ಖರ್ಚು ವೆಚ್ಚ ಸುಮಾರು 113.12 ಕೋಟಿ ರೂಗಳೆಂದು ತಿಳಿಸಲಾಗಿದೆ. ಖರ್ಚು ವೆಚ್ಚ ಕಳೆದು ಆದಾಯ ಮೀರಿಯೂ ಶೇ 44 ರಷ್ಟು ಹೆಚ್ಚಳವಾಗಿದೆ.
ಈ ಬಗ್ಗೆ ಸಮಗ್ರ ದಾಖಲೆ ನೀಡಬೇಕು ಇಲ್ಲವಾದಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಆರೋಪ ಸಾಬೀತಾದಲ್ಲಿ ಐ ಪಿ ಸಿ ಸೆಕ್ಷನ್ 13(2) ಪ್ರಕಾರ ಡಿಕೆಶಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ಐಪಿಸಿ ಸೆಕ್ಷನ್13(1)(ಇ) ಪ್ರಕಾರ ಆದಾಯದ ಮೂಲ ದಾಖಲೆಗಳನ್ನು ಕೊಡಬೇಕು. ಇಲ್ಲವಾದಲ್ಲಿ ಶಿಕ್ಷೆ ಖಚಿತ ಎಂದು ನ್ಯಾಯಾಲಯ ತಿಳಿಸಿದೆ.