ಅಧಿವೇಶನಕ್ಕೆ ಮಾಧ್ಯಮಗಳಿಗೆ ನೋ ಎಂಟ್ರಿ: ವಿರೋಧಿ ನಾಯಕರು ಏನ್ ಹೇಳ್ತಾರೆ..?

ಬೆಂಗಳೂರು,ಅ.09: ವಿಧಾನಮಂಡಲ ಅಧಿವೇಶನ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ದೃಶ್ಯ ಮಾಧ್ಯಮಗಳಿಂದ ಚಿತ್ರೀಕರಣಕ್ಕೆ ನಿರ್ಬಂಧ ಹೇರಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ. ಸಂಸತ್ ಮಾದರಿಯಲ್ಲಿ ಸರ್ಕಾರದಿಂದಲೇ ಮುದ್ರಿತ ದೃಶ್ಯ ಹಂಚಿಕೆ ಮಾಡಲಾಗುತ್ತದೆ. ಸಭಾಧ್ಯಕ್ಷರಿಂದ ಮಾಧ್ಯಮ ನಿರ್ಬಂಧ ಆದೇಶ ಪಾಲನೆ ಮಾಡಲಾಗುತ್ತದೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸ್ಪಷ್ಟನೆ ನೀಡಿದ್ದಾರೆ. ಇದುವರೆಗೆ ವಿಧಾನಮಂಡಲ ಅಧಿವೇಶನ ಚಿತ್ರೀಕರಣಕ್ಕೆ ದೃಶ್ಯ ಮಾಧ್ಯಮಗಳಿಗೆ ಅವಕಾಶವಿತ್ತು. ಇದೀಗ ಅಧಿವೇಶನ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ.

ಅಧಿವೇಶನಕ್ಕೆ ಮಾಧ್ಯಮಗಳಿಗೆ ನೋ ಎಂಟ್ರಿ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿಯವರ ಪ್ರಜಾಪ್ರಭುತ್ವದ ಮೂಲಮಂತ್ರವಿದು ಎಂಬುದಾಗಿ ಸರ್ಕಾರದ ನಡೆಗೆ ವ್ಯಂಗ್ಯವಾಡಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ನಡೆಸುವ ವಿಚಾರವೆಲ್ಲವೂ ಪಾರದರ್ಶಕವಾಗಿರಬೇಕು, ಜನರಿಗೆ ಚರ್ಚೆಗಳು ಪಾರದರ್ಶಕವಾಗಿಯೇ ತಿಳಿಯಬೇಕು. ಆಗಲೇ ಪ್ರಜಾಪ್ರಬಹುತ್ವಕ್ಕೆ ಅರ್ಥ ಬರುವುದು..ಆದರೆ ಆಡಳೀತ ಪಕ್ಷ ಅದ್ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ನಾವು ಯಾವತ್ತೂ ಹಾಗೆ ಮಾಡಿಲ್ಲ.. ಸಂಪೂರ್ಣ ಸ್ವಾತಂತ್ರ್ಯವನ್ನ ಕೊಟ್ಟಿದ್ದೆವು ಎಂದಿದ್ದಾರೆ.

ಅಧಿವೇಶನಕ್ಕೆ ಮಾಧ್ಯಮ ನಿರ್ಭಂದ ಹಳೆಯ ಪ್ರಸ್ತಾಪ ಎಂಬ ವಿಚಾರವಾಘಿ ಮಾತನಾಡಿದ ಅವರು ಹಳೆಯ ಪ್ರಸ್ತಾಪ ಅಂದ್ರೆ ನಾವ್ಯಾಕೆ ಮಾಡಲಿಲ್ಲ..? ನಾವು ಮಾಡಬಹುದಿತ್ತಲ್ವೇ..ನಮ್ಮ ಎಲ್ಲ ಪ್ರಸ್ತಾಪ ಇವ್ರು ಮಾಡ್ತಾರಾ..? ಇದು ಗೂಬೆ ಕೂರಿಸುವ ಪ್ರಯತ್ನ.

ಇಂತ ಕೆಲಸವನ್ನ ನಾವು ಮಾಡಿಲ್ಲ,ಮಾಡೋದು ಇಲ್ಲ..ಒಟ್ಟಿನಲ್ಲಿ ಅಧಿವೇಶನದ ಮಾಧ್ಯಮಗಳನ್ನ ನಿರ್ಭಂದಿಸುವುದು ಸರಿಯಲ್ಲ ಎಂದು ಮಾಝಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.  

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.