ನಟ ಚೇತನ್ ಈಗಾಗಲೇ ಹಲವಾರು ಸಾಮಾಜಿಕ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದು; ತಮ್ಮ ಮದುವೆ ವಿಚಾರದಲ್ಲೂ ಸಾಮಾಜಿಕತೆಯನ್ನು ಮೆರೆದಿದ್ದಾರೆ.ಇನ್ನೇನು ನಟ ಚೇತನ್ ಮದುವೆಗೆ ಬೆರಳೆಣಿಕೆಯ ದಿನಗಳಷ್ಟೆ ಬಾಕಿ ಇದೆ .ಬಹಳ ಸಿಂಪಲ್ ಆಗಿ ಚೇತನ್ ಹಾಗೂ ಮೇಘ ಮದುವೆಯಾಗುತ್ತಿದ್ದು , ಉಳಿದವರಿಗೆ ಮಾದರಿಯಾಗುತ್ತಿದ್ದಾರೆ.
ಈಗಾಗಲೇ ತಮ್ಮ ಮದುವೆ ಲಗ್ನ ಪತ್ರಿಕೆಯ ಮೂಲಕ ಸುದ್ದಿಯಾಗಿದ್ದ ನಟ ಚೇತನ್ . ಇದೀಗ ಮತ್ತೊಂದು ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ.ನಟ ಚೇತನ್ ಹಾಗೂ ಅವರ ಭಾವಿ ಪತ್ನಿ ಮೇಘ ಅನಾಥಶ್ರಮದ ಮಕ್ಕಳಿಗೆ ಹಾಸಿಗೆ ನೀಡಿ ಮಕ್ಕಳಿಗೆ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಚೇತನ್ ಮೇಘ, ವಿನಯ್ , ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ತಯಾರಾಗುತ್ತಿದ್ದೇವೆ ಎಂದು ಹಾಸಿಗೆ ಹೊತ್ತ ಫೋಟೋವನ್ನು ಹಂಚಿಕೊಂಡಿದ್ದಾರೆ .