ಈಗಂತೂ ಸ್ಟಾರ್ ನಟರು ಅದ್ಧೂರಿಗಿಂತ ಸಿಂಪಲ್ ಆಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ರೂಢಿ ಶುರುವಾಗಿದೆ..ಸ್ಟಾರ್ ನಟರಾದ ದರ್ಶನ್, ಸುದೀಪ್, ಶಿವಣ್ಣ, ಧನಂಜಯ್ ಸೇರಿದಂತೆ ಅನೇಕರು ಸಿಂಪಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅಭಿಮಾನಿಗಳ ಮನಗೆದ್ದವರು..ಈ ಸಾಲಿಗೆ ಸದ್ಯ ಉಪ್ಪಿ ದಾದ ಸೇರ್ಪಡೆಯಾಗ್ತಿದ್ದಾರೆ..ಯಸ್..ಇದೇ 18ರಂದು ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಅಂದು ಸಾಮಾನ್ಯವಾಗಿ ಉಪ್ಪಿ ಅಭಿಮಾನಿಗಳು ಮುನ್ನಾದಿನ ರಾತ್ರಿಯಿಂದಲೇ ಉಪ್ಪಿ ಮನೆ ಮುಂದೆ ಕಾವಲಿದ್ದು, ಉಡುಗೊರೆಯನ್ನಿತ್ತು ವಿಶ್ ಮಾಡುವುದು ಸಂಪ್ರದಾಯ..
ಆದರೆ ಈ ಬಾರಿ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಬಾಕಿ ಉಳಿದಿರುವಾಗಲೇ ಉಪ್ಪಿ ತಮ್ಮ ಅಭಿಮಾನಿಗಳಲ್ಲಿ ಟ್ವಿಟ್ಟರ್ ಮೂಲಕ ಒಂದು ಮನವಿ ಮಾಡಿದ್ದಾರೆ. ನನ್ನ ಹುಟ್ಟುಹಬ್ಬವನ್ನು ಯಾರೂ ಕೇಕ್, ಹಾರಗಳನ್ನು ತಂದು ಸೆಲೆಬ್ರೇಟ್ ಮಾಡಬೇಡಿ..ಬದಲಾಗಿ ಒಂದು ಗಿಡವನ್ನು ತೆಗೆದುಕೊಂಡು ಬನ್ನಿ..ಮುಂದೆ ಅದನ್ನು ಪೋಷಿಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಉಪೇಂದ್ರರವರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ.