ಕೋವಿಡ್-19 ಸೋಂಕು ತಡೆಗಟ್ಟಲು ವಿಶ್ವದ ದೊಡ್ಡಣ ಅಮೆರಿಕ ಅಕ್ಷರಶಃ ಕೈ ಸೋತು ಕುಳಿತಿದೆ. ನಿನ್ನೆ(ಮಂಗಳವಾರ) ಒಂದೇ ದಿನ 47 ಸಾವಿರ ಜನಕ್ಕು ಅಧಿಕ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ. ಅಮೆರಿಕದಲ್ಲಿ ಆರಂಭದ ದಿನದಿಂದ ಇದೇ ಮೊದಲ ಭಾರಿಗೆ ಅಧಿಕ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಅಮೆರಿಕನ್ನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಅಮೆರಿಕದ ನ್ಯೂಯಾರ್ಕ್ ಕರೋನಾದ ಕೇಂದ್ರಬಿಂದುವಾಗಿತ್ತು. ಆದರೆ ಇದೀಗ ಕ್ಯಾಲಿಫೋರ್ನಿಯಾ, ಟೆಕ್ಷಾಸ್, ಆರಿಜೋನಾದಲ್ಲು ಕರೋನಾ ಸೋಂಕು ಹೆಚ್ಚುತ್ತಾ ಇದೆ. ಟೆಕ್ಸಾಸ್ ಮತ್ತು ಪ್ಲೋರಿಡಾ ಸೇರಿ ಇನ್ನು 10 ರಾಜ್ಯಗಳಲ್ಲಿ ಜೂನ್ ತಿಂಗಳೊಂದರಲ್ಲೇ ಕರೋನಾ ದ್ವಿಪಟ್ಟಾಗಿದೆ. ಇನ್ನು ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಿಯಾದ ವೈದ್ಯಕೀಯ ವ್ಯವಸ್ಥೆ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಕಂಡುಬರುತ್ತಿದೆ.
ಈವರೆಗೆ ಅಮೆರಿಕದಲ್ಲಿ ಕರೋನಾ ಸೋಂಕಿಗೆ 1.30 ಲಕ್ಷಕ್ಕು ಹೆಚ್ಚು ಜನ ಸಾವನ್ನಪ್ಪಿದ್ದಾರೆ. 27 ಲಕ್ಷಕ್ಕು ಅಧಿಕ ಜನರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1.3 ಲಕ್ಷಕ್ಕು ಅಧಿಕ ಜನರು ಗುಣಮುಖರಾಗಿದ್ದಾರೆ. ಇನ್ನು ನಿನ್ನೆ(ಮಂಗಳವಾರ) ಒಂದೇ ದಿನ 613 ಜನ ಕರೋನಾ ಸೋಂಕಿತರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆಂಥೋನಿ ಫೌಸಿ ಇನ್ನು ಮುಂದೆ ಕರೋನಾ ಎರಡು ಪಟ್ಟು ಅಧಿಕ ಮಂದಿಗೆ ತಗಲುವ ಸಾಧ್ಯತೆ ಹೆಚ್ಚಿದೆ. ಪರಿಸ್ಥಿತಿ ಕೈ ಮೀರಿ ಹೋಗಿದೆ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ ಇದೇ ರೀತಿ ಮುಂದುವರೆದರೆ ಪ್ರತಿನಿತ್ಯ 1 ಲಕ್ಷ ಮಂದಿ ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದ್ದಾರೆ.