ಇಲಿ ಕಿವಿ ಗಿಡದ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ?

ಕರಾವಳಿಯಲ್ಲಿ ಹೆಚ್ಚಾಗಿ ಕಂಡುಬರುವ ಅದರಲ್ಲೂ ಎಲ್ಲಾ ಸೀಝನ್ ಗಳಲ್ಲೂಎಲ್ಲಾ ಪ್ರದೇಶಗಳಲ್ಲೂಈ ಗಿಡ ಬೆಳೆಯುತ್ತದೆ. ಇದರ ಎಲೆ ಇಲಿಯ ಕಿವಿಯನ್ನು ಹೋಲುವುದರಿಂದ ಇದಕ್ಕೆ ಇಲಿಕಿವಿ ಸಸ್ಯ ಎಂದು ಕರೆಯುತ್ತಾರೆ.” ಕನ್ವೋಲ್ವುಲೇಸಿ” ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ರೆನಿಫೋರ್ಮಿಸ್ ಎಂಬ ವೈದ್ಯಕೀಯ ಹೆಸರಿಲ್ಲೂ ಸಹ  ಕರೆಯುತ್ತಾರೆ

ಕಿವಿ ನೋವಿದ್ದರೆ  ಈ ಎಲೆಯನ್ನು ಜಜ್ಜಿ ಇದರ ರಸ ತೆಗೆದು ಎರಡು ಹನಿಗಳನ್ನು ಕಿವಿಗೆ ಹಾಕಬೇಕು. ಕಿವಿ ನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.

ಈ ಎಲೆಯ ರಸಕ್ಕೆ ಎರಡು ಮೂರು ಚಿಟಿಕೆ ಬಜೆಯ ಹುಡಿ ಮತ್ತು ಸ್ವಲ್ಪ ಜೇನು ತುಪ್ಪದ ಜೊತೆ ಸೇರಿಸಿ ಕುಡಿಯುವುದರಿಂದ ಮಕ್ಕಳ ತೊದಲುವಿಕೆ ಹಾಗೂ ಸ್ವರದ ತೊಂದರೆ ಇದ್ದಲ್ಲಿ  ನಿವಾರಣೆಯಾಗುವುದು. ದೊಡ್ಡವರೂ ಇದನ್ನು  ತೆಗೆದುಕೊಳ್ಳಬಹುದು.

ಪಿತ್ತ ಶಮನಕ್ಕೆ ಇದರ ಕಷಾಯವನ್ನು ಮಾಡಿ ಸೇವಿಸಬಹುದಾಗಿದೆ. ಇದರ ರಸವನ್ನು ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆಗಾಗಿ ನೀಡಬಹುದು, ಹಾಗೂ ಎಲೆಗಳನ್ನು ಜಜ್ಜಿ ಗಾಯಕ್ಕೆ ಹಚ್ಚಬಹುದು.

ಕಣ್ಣಿನ ಉರಿ ಹಾಗೂ ನಿದ್ರಾ ಹೀನತೆಗೂ ಇದರ ಕಷಾಯವನ್ನು ಮಾಡಿಕೊಂಡು ಕುಡಿಯಬಹುದು. ಜಂತು ಹುಳದ ನಿವಾರಣೆಗೂ ಇದರ ರಸವನ್ನು ಸೇವಿಸಬಹುದು .

Latest News

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೇಶ-ವಿದೇಶ

ನಾವು ಹೇಳುವ ಯೋಜನೆಯನ್ನು ಅಧಿಕಾರಿಗಳು “ಹೌದು ಸರ್” ಎಂದು ಹೇಳಿ ಕಾರ್ಯರೂಪಕ್ಕೆ ತರಬೇಕು: ನಿತಿನ್ ಗಡ್ಕರಿ!

‘ಹೌದು ಸಾರ್’ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ.