ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2020ರಲ್ಲಿ ಕೆಲವು ಗ್ರಹಗಳು ಹಾಗೂ ನಕ್ಷತ್ರಗಳು ವಿಶೇಷ ಚಲನೆಯನ್ನು ಕೈಗೊಳ್ಳುತ್ತವೆ. ಅವು ಒಂದು ಮನೆಯಿಂದ ಇನ್ನೊಂದು ಮನೆಗೆ ವಿಭಿನ್ನ ಬದಲಾವಣೆ ಹಾಗೂ ಪರಿಣಾಮಗಳನ್ನು ಉಂಟುಮಾಡುತ್ತವೆ. ಅವು ಮನುಷ್ಯರ ಮೇಲೆ ನೇರ ಪ್ರಭಾವ ಬೀರುವವು. ಅವುಗಳಿಂದಾಗಿ ವ್ಯಕ್ತಿ ಆರೋಗ್ಯ, ಜೀವನ, ಸಂಗಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ತೊಂದರೆ ಅಥವಾ ಅದೃಷ್ಟಗಳು ಉಂಟಾಗಬಹುದು.
2020ರಲ್ಲಿ ಉಂಟಾಗುವ ಖಗೋಳ ಕಾಯಗಳ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮಕಾರಿ ಪ್ರಭಾವ ಬೀರುತ್ತಿದ್ದು, ಮಕರ, ಕನ್ಯಾ, ವೃಷಭ, ಸಿಂಹ, ಧನು ರಾಶಿಯವರು ಅತ್ಯುತ್ತಮ ಅದೃಷ್ಟವನ್ನು ಪಡೆದುಕೊಳ್ಳುವರು.
ಮಕರ ರಾಶಿ: ಮಕರ ರಾಶಿಯಲ್ಲಿ ಜನಿಸಿದವರು 2020ರಲ್ಲಿ ಜೀವನದ ಅತ್ಯುತ್ತಮ ಅವಧಿಯನ್ನು ಅನುಭವಿಸುವರು. ಇವರು ಯಾವುದೇ ವಿಷಯ ಅಥವಾ ಯೋಜನೆಯನ್ನು ಕೈಗೊಂಡರೆ ಅವು ಅದ್ಭುತ ಫಲಿತಾಂಶದ ಮೂಲಕ ಯಶಸ್ಸನ್ನು ತಂದುಕೊಡುತ್ತದೆ. ನಿಮ್ಮ ರಾಶಿಯ ಆಡಳಿತಗಾರನ ಮೇಲೆ ಶನಿಯ ದೃಷ್ಟಿ ಇರುತ್ತದೆ. ಇತರ ಗ್ರಹಗಳ ಅನುಕೂಲತೆ ಹಾಗೂ ಉತ್ತಮ ಫಲದಿಂದಾಗಿ ನೀವು ಇಷ್ಟಪಡುವ ಎಲ್ಲಾ ಸಂಗತಿಗಳು ಸುಲಭವಾಗಿ ನೆರವೇರುತ್ತವೆ. 2020ರಲ್ಲಿ ಅದ್ಭುತ ಯಶಸ್ಸು ಹಾಗೂ ಅದೃಷ್ಟವನ್ನು ಹೊಂದುವ ವ್ಯಕ್ತಿಗಳಾಗಿರುತ್ತೀರಿ.
ಕನ್ಯಾ ರಾಶಿ: ಕನ್ಯಾರಾಶಿಯವರಿಗೆ 2020ರ ವರ್ಷವು ಫಲಪ್ರದವಾಗಿರುತ್ತವೆ. ಹೊಸ ವರ್ಷದಲ್ಲಿ ಇವರ ಹಣಕಾಸಿನ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ. ಅದು ಅವರನ್ನು ಅತ್ಯುತ್ತಮ ಮಟ್ಟಕ್ಕೆ ಕರೆದೊಯ್ಯುವುದು. ಜೊತೆಗೆ ವಿವಿಧ ಮೂಲದಿಂದ ಅಥವಾ ಒಂದೇ ಮೂಲದಿಂದ ಹಣದ ಹರಿವು ಹೆಚ್ಚಾಗಿರುತ್ತದೆ. ನೀವು ಹೊಸ ಸಂಗತಿಗಳಿಗೆ ಸಂಬಂಧಿಸಿದಂತೆ ಹಣದ ಹೂಡಿಕೆಯನ್ನು ಮಾಡಬಹುದು. ಅದರ ಬಗ್ಗೆ ಎರಡು ಚಿಂತನೆ ಮಾಡುವ ಅಗತ್ಯ ಇರುವುದಿಲ್ಲ. ಯೋಜನೆಯನ್ನು ಕೈಗೊಳ್ಳುವ ಮೊದಲೇ ಸಾಕಷ್ಟು ಚಿಂತನೆ ಹಾಗೂ ಸಮಾಲೋಚನೆ ನಡೆಸಿಯೇ ನಿರ್ಧಾರವನ್ನು ಕೈಗೊಳ್ಳುವ ವ್ಯಕ್ತಿಗಳು ನೀವಾಗಿರುತ್ತೀರಿ. ಹಾಗಾಗಿ ನೀವು ಅಂತಿಮ ನಿರ್ಧಾರಕ್ಕೆ ಬಂದ ಮೇಲೆ ಹಣದ ಹೂಡಿಕೆ ಮಾಡಬಹುದು.
ವೃಷಭ ರಾಶಿ: ವರ್ಷದ ಆರಂಭದಲ್ಲಿ ಕೊಂಚ ಆತಂಕ ಹಾಗೂ ತೊಂದರೆಯನ್ನು ಅನುಭವಿಸಬಹುದು. ಆದರೆ ಹಠಾತ್ ಬದಲಾವಣೆಯಿಂದ ಸ್ಥಿತಿಗಳು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತವೆ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಗುರು ಮತ್ತು ಶನಿಯು ನಿಮಗೆ ಉತ್ತಮ ಅದೃಷ್ಟವನ್ನು ತಂದುಕೊಡಲು ಸಹಾಯ ಮಾಡುತ್ತವೆ. ಪ್ರೀತಿಯ ವಿಷಯದಲ್ಲಿ 2020ರ ವರ್ಷ ಅತ್ಯುತ್ತಮ ಅದೃಷ್ಟವನ್ನು ತಂದುಕೊಡುತ್ತದೆ. ಹೊಸ ವ್ಯಕ್ತಿಯ ಭೇಟಿಯು ನಿಮಗೆ ಲಾಭವನ್ನು ತಂದುಕೊಡುವುದು. ನಿಮ್ಮ ಆರ್ಥಿಕ ಜೀವನವು ಅದ್ಭುತ ಬದಲಾವಣೆಯನ್ನು ತಂದುಕೊಡುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯ ವ್ಯಕ್ತಿಗಳು ಯಾವುದೇ ಶ್ರಮವಿಲ್ಲದೆಯೇ ಎಲ್ಲರ ಗಮನವನ್ನು ಕೇಂದ್ರೀಕರಿಸುವ ವ್ಯಕ್ತಿಗಳಾಗಿರುತ್ತಾರೆ. ಕಾಂತಿಯವಾದ ವ್ಯಕ್ತಿತ್ವ ಹಾಗೂ ಸ್ವಭಾವವು ಎಲ್ಲರ ಗಮನ ಸೆಳೆಯುವುದು. ಇವರನ್ನು ಇತರರು ಸುಲಭವಾಗಿ ಮೆಚ್ಚಿಕೊಳ್ಳುತ್ತಾರೆ. ಅಂತೆಯೇ ಇವರನ್ನು ಅಸಹನೀಯವಾಗಿ ಕಾಣುವುದು ಸಹ ಅವರಿಗೆ ಅಷ್ಟೇ ಕಷ್ಟದ ಸಂಗತಿಯಾಗಿರುತ್ತದೆ. ಈ ರಾಶಿಯವರು ಸದಾ ಉತ್ಸುಕರು ಹಾಗೂ ಗೆಲುವಿನ ಮನೋಭಾವ ಹೊಂದಿದವರಾಗಿರುವುದರಿಂದ ಅದೃಷ್ಟದ ಚಿಹ್ನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇವರು ಕೈಗೊಂಡ ಪ್ರತಿಯೊಂದು ಯೋಜನೆಯಲ್ಲೂ ಅಧಿಕ ಶ್ರಮವನ್ನು ವಿನಿಯೋಗಿಸುವುದರ ಮೂಲಕ ಸಾಧನೆಯನ್ನು ಮಾಡುತ್ತಾರೆ. 2020ರಲ್ಲಿ ಆಶ್ಚರ್ಯಕರವಾದಂತಹ ಅದ್ಭುತ ಆರೋಗ್ಯ ಸ್ಥಿತಿಯನ್ನು ಪಡೆದುಕೊಳ್ಳುವರು. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ಹಾಗೂ ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಅಥವಾ ಪ್ರೇಮಿಯೊಂದಿಗೆ ಸುಗಮವಾದ ಸಂಬಂಧವನ್ನು ಹೊಂದಿರುತ್ತಾರೆ.
ಧನು ರಾಶಿ: ಧನು ರಾಶಿಯು ಅತ್ಯಂತ ಸಾಹಸ ಚಿಹ್ನೆಗಳಲ್ಲಿ ಒಂದು. ಇವರು ಆಳವಾದ ಕಾಲ್ಪನಿಕ ಚಿಂತನೆಯನ್ನು ನಡೆಸುತ್ತಾರೆ. ಇವರು ಏನನ್ನು ಬಯಸುತ್ತಾರೆ ಅಥವಾ ಏನನ್ನು ಸಾಧಿಸಲು ಚಿಂತಿಸುತ್ತಾರೆ ಎನ್ನುವುದಕ್ಕೆ ಯಾವುದೇ ಗಡಿಯಿಲ್ಲ. ಅವರ ಈ ಬಗೆಯ ಆಲೋಚನೆಯೇ ಬಹುತೇಕ ಸಂದರ್ಭದಲ್ಲಿ ಸಹಾಯವಾಗುತ್ತದೆ. ಇವರು ತಮಗೆ ಯಾವುದೇ ನಿರ್ಬಂಧಗಳನ್ನು ಹಾಕಿಕೊಳ್ಳಲು ಬಯಸುವುದಿಲ್ಲ. 2020ರ ವರ್ಷವು ಇವರ ಗುರಿ ಸಾಧಿಸಲು ಹಾಗೂ ಅಂದುಕೊಂಡ ಯೋಜನೆಯನ್ನು ಸುಲಭವಾಗಿ ಕೈಗೊಳ್ಳಲು ಸಹಾಯ ಮಾಡುತ್ತದೆ. ಇಷ್ಟು ದಿನಗಳ ಕಾಲ ಅನುಭವಿಸಿದ ತೊಂದರೆಗಳು ಹಾಗೂ ಹಿಂಸೆಗಳು ದೂರವಾಗುತ್ತವೆ.