ಮಂಗಳೂರು,ಸೆ.27: ವರ್ಷಗಳಿಂದ ಬಾಲಿವುಡ್ ನಲ್ಲೇ ಹೆಸರು ಮಾಡಿರುವ ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿ ಇಂದು ತವರೂರಿಗೆ ಭೇಟಿ ನೀಡಿದ್ದರು. ಮಂಗಳೂರಿನ ಕೆಎಂಸಿ ಸಂಸ್ಥೆ ಪ್ರಾರಂಭಿಸಿದ ಮಹಿಳಾ ಮತ್ತು ಮಕ್ಕಳ ಕೇಂದ್ರವನ್ನು ಉದ್ಘಾಟಿಸಿದ ಅವರು ನಂತರ ದಕ್ಷಿಣ ಕನ್ನಡದ ಪ್ರಮುಖ ದೇಗುಲಗಳಲ್ಲಿ ಒಂದಾದ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ಕುಟುಂಬದ ಮಂದಿಯೊಂದಿಗೆ ದೇಗುಲಕ್ಕಾಗಿ ಚಿನ್ನದ ಕೊಡವನ್ನು ಸಮರ್ಪಣೆ ಮಾಡಿದರು. ಪ್ರಮುಖ ಅರ್ಚಕರು ಶಿಲ್ಪಾ ಶೆಟ್ಟಿಗೆ ದೇವರ ಶೇಷ ವಸ್ತ್ರವನ್ನು ನೀಡಿ ಗೌರವಿಸಿದರು.