ರಾತ್ರಿ ಕಳೆದು ಬೆಳಕು ಹರಿಯುವ ಮುನ್ನ ಕಣ್ಸನ್ನೆ ಬೆಡಗಿಯೆಂಬ ಹೆಸರು ಮಾಡಿದ್ದ ಮಲಯಾಳಿ ಬೆಡಗಿ ನಟಿ ಪ್ರಿಯಾ ವಾರಿಯರ್ ಕನ್ನಡ ಚಿತ್ರದಲ್ಲಿ ಅಭಿನಯಿಸ್ತಿರುವ ವಿಚಾರ ಸ್ವಲ್ಪ ಹಳೆಯದು. ನಿರ್ದೇಶಕ ವಿ.ಕೆ.ಪ್ರಕಾಶ್ ಆಕ್ಷನ್ ಕಟ್ ಹೇಳ್ತಿರುವ ವಿಷ್ಣುಪ್ರಿಯಾ ಚಿತ್ರದಲ್ಲಿ ಪ್ರಿಯಾಗೆ ಜೊತೆಯಾಗಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಬಿಡುಗಡೆ ಸಮಾರಂಭಕ್ಕೆ ಬೆಂಗಳೂರಿಗೆ ಬಂದಿದ್ದ ಪ್ರಿಯಾರನ್ನು ಮಾಧ್ಯಮ ಮಿತ್ರರು ಮಾತನಾಡಿಸಿದ್ದರು. ನಿಮ್ಮ ನೆಚ್ಚಿನ ನಟ ಯಾರು..? ಯಶ್ ಅಥವಾ ಅಪ್ಪು..? ಯಾರ ಜೊತೆಗೆ ಅಭಿನಯಿಸುವ ಆಸೆ ನಿಮಗಿದೆ ಅಂತ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಿಯಾ “ನಾನಿದನ್ನು ಮೊದಲೇ ಹೇಳಿದ್ದೆ..ಯಾವುದೇ ನಟನ ಹೆಸರು ಹೇಳಲು ಮತ್ತು ಯಾವುದೇ ಪ್ರಾಜೆಕ್ಟ್ ಕಳೆದುಕೊಳ್ಳಲು ನಾನು ಬಯಸೋದಿಲ್ಲ.ನಾನು ಎಲ್ಲರೊಂದಿಗೂ ಕೆಲಸ ಮಾಡಲು ಇಚ್ಛಿಸುತ್ತೇನೆ” ಎಂದು ಸಖತ್ ಕೂಲ್ ಆಗಿಯೇ ಹೇಳಿಕೊಂಡಿದ್ದಾರೆ..