ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಅದ್ಯಾವಾಗ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಡ್ತಾರೆ ಅಂತ ಕಾಯ್ತಾ ಇದ್ದ ಕನ್ನಡ ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಕಾದಿದೆ. ಹೌದು, ವಿಷ್ಣುಪ್ರಿಯಾ ಚಿತ್ರದ ಮೂಲಕ ಪ್ರಿಯಾ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಪಡ್ಡೆಹುಲಿ ಖ್ಯಾತಿಯ ನಟ ಶ್ರೇಯಸ್ ಮಂಜು ಈ ಚಿತ್ರದ ನಾಯಕನಾಗಲಿದ್ದಾರಂತೆ.
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕೆ ಮಂಜು ಮತ್ತು ಮಗ ಶ್ರೇಯಸ್ ಇಬ್ಬರು ವಿಷ್ಣುವರ್ಧನ್ ಅಪ್ಪಟ ಅಭಿಮಾನಿ. ಶ್ರೇಯಸ್ ಸಿನಿಮಾದಲ್ಲಿ ವಿಷ್ಣು ಛಾಯೆ ಕಾಣಿಸುತ್ತೆ. ಎರಡನೆ ಸಿನಿಮಾದಲ್ಲೂ ವಿಷ್ಣು ಹೆಸರು ಇಡುವ ಮೂಲಕ ವಿಷ್ಣುವರ್ಧನ್ ಮೇಲಿನ ಅಭಿಮಾನವನ್ನು ಮೆರೆಯುತ್ತಿದ್ದಾರೆ.
ಚಿತ್ರಕ್ಕೆ ಮಲಯಾಳಂನ ಖ್ಯಾತ ನಿರ್ದೇಶಕ ವಿ ಕೆ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೈಜ್ಯ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಧಾರವಾಡ ಮೂಲಕದ ಸಿಂಧು ಶ್ರೀ ಕಥೆ ಬರೆದಿದ್ದಾರೆ. ಮುಂದಿನ ತಿಂಗಳು ಸೆಪ್ಟಂಬರ್ 9ಕ್ಕೆ ಚಿತ್ರ ಸೆಟ್ಟೇರಲಿದೆ. ಅದಕ್ಕು ಮೊದಲು ಚಿತ್ರತಂಡ ವರ್ಕ್ ಶಾಪ್ ಮಾಡಲಿದ್ದು ಪ್ರಿಯಾ ಪ್ರಕಾಶ್ ಮುಂದಿನ ತಿಂಗಳೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.