ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ದ.ಕ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.ವಿದ್ಯುತ್ ಬಾಕಿ ಬಿಲ್ ಕಟ್ಟುವ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಬಾಯಿಗೆ ಬಂದಂತೆ ನುಡಿದಿದ್ದಲ್ಲದೆ, ಹಲ್ಲೆ ಮಾಡಲು ಮುಂದಾಗಿದ್ದಾನೆ ..ಈ ವೀಡಿಯೋ ಇದೀಗ ವೈರಲಾಗಿದ್ದು ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಅಂದಹಾಗೆ ಮಂಗಳವಾರ ಮೆಸ್ಕಾ ನೌಕರರು ಇವರ ಮನೆಗೆ ತೆರಳಿದ್ದು , ಬಿಲ್ ಕಟ್ಟುವಂತೆ ಹೇಳಿದ್ದಾರೆ. ಆ ಸಂದರ್ಭದಲ್ಲಿ ವಿಚಾರಿಸಲು ಬಂದ ನೌಕರರ ಮೇಲೆ ಹೇಗೆ ಸಿಎಎ ಕಾಯ್ದೆ ವಿರೋಧಿಸುವ ನೆಪದಲ್ಲಿ ಆಕ್ರಮಣಗೈಯಲಾಗಿದೆ …ಇನ್ನು ಕೆಲಸದಲ್ಲಿರುವ ಸರ್ಕಾರಿ ನೌಕರರ ಮೇಲೆ ಆಕ್ರಮಣ ಮಾಡುವುದು ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಪರಾಧ ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ..