ಟಾಲಿವುಡ್ ನಲ್ಲಿ ರಿಯಲ್ ಲೈಫ್ ಬೆಸ್ಟ್ ಜೋಡಿಗಳ ಪೈಕಿ ಸಮಂತಾ ಹಾಗೂ ನಾಗ ಚೈತನ್ಯ ಜೋಡಿ ಎಲ್ಲರ ಮೆಚ್ಚುಗೆ ಗಳಿಸಿದೆ. ಮದ್ವೆಯಾಗಿ ವರ್ಷ ಕಳೆಯುತ್ತಾ ಬಂದಿರೋದ್ರಿಂದ ಈ ಜೋಡಿ ಎಲ್ಲೇ ಹೋದರೂ ಬಂದರೂ ಒಂದೇ ಪ್ರಶ್ನೆಗೆ ಉತ್ತರಿಸಬೇಕಾಗಿ ಬಂದಿದೆ..ಅದೇನಂದರೆ ನೀವು ತಂದೆ ತಾಯಿಯಾಗೋದು ಯಾವಾಗ ಅಂತ..
ಕೊನೆಗೂ ಈ ಪ್ರಶ್ನೆಗೆ ಸಮಂತಾ ಉತ್ರ ನೀಡಿದ್ದಾರೆ..2022ರ ಅಗಸ್ಟ್ 7ರಂದು ಬೆಳಗ್ಗೆ 7 ಗಂಟೆಗೆ ತಾನು ಮಗುವನ್ನು ಪಡೆಯಲಿರೋದಾಗಿ ಅಕ್ಕಿನೇನಿ ಕುಟುಂಬದ ಸೊಸೆ ಹೇಳಿಕೊಂಡಿದ್ದಾರೆ..
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸಂದರ್ಶನವೊಂದ್ರಲ್ಲಿ ಮಗು ಯಾವಾಗ ಬೇಕೆಂಬುದರ ಬಗ್ಗೆ ಶೀಘ್ರದಲ್ಲೇ ತಾವು ನಿರ್ಧಾರಕ್ಕೆ ಬರಲಿರುವುದಾಗಿ ಸಮಂತಾ ಹೇಳಿಕೊಂಡಿದ್ದರು. ಅಲ್ಲದೇ ಮಗು ಬಂದ ಮೇಲೆ ತಾವು ಕೆಲಸ್ಕೆ ಮಹತ್ವ ನೀಡದೆ ಮಗುವಿನ ಲಾಲನೆ ಪಾಲನೆಗೆ ಹೆಚ್ಚಿನ ಮಹತ್ವ ನೀಡಲಿರುವುದನ್ನೂ ಅವರು ತಿಳಿಸಿದ್ದಾರೆ..ತನ್ನ ಬಾಲ್ಯ ಚೆನ್ನಾಗಿರಲಿಲ್ಲ ಆದ್ದರಿಂದ ತನ್ನ ಮಗುವಿಗೆ ಆ ಸಮಸ್ಯೆ ಕಾಡಬಾರದು ಎಂಬುದನ್ನು ಸಮಂತಾ ಓನ್ ಆಗಿಯೇ ಹೇಳಿಕೊಂಡಿದ್ದಾರೆ.