ಕೊರೊನಾದಿಂದ ಧ್ರುವ ಸರ್ಜಾ ದಂಪತಿ ಗುಣಮುಖ


ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಅವರೇ ತಮ್ಮ ಟ್ವಿಟರ್‍ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಳೆದ ಜು.3ರಂದು ಧ್ರುವ ಸರ್ಜಾ ದಂಪತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ತಮ್ಮ ಹಾಗೂ ತಮ್ಮ ಪತ್ನಿ ಪ್ರೇರಣಾ ಅವರ ಕೋವಿಡ್-19 ಪರೀಕ್ಷೆಯ ವರದಿ ನೆಗೆಟಿವ್ ಬಂದಿರುವುದಾಗಿ ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ. ತಾವು ಗುಣಮುಖರಾಗಲು ಅಣ್ಣಾ ಚಿರಂಜೀವಿ ಸರ್ಜಾನ ಅವರ ಆಶಿರ್ವಾದ, ಪ್ರತಿ ಹಂತದಲ್ಲೂ ಸ್ಪೂರ್ತಿ ತುಂಬಿದ ಅಂಕಲ್ ಅರ್ಜುನ್ ಸರ್ಜಾ ಹಾಗೂ ತಮಗೆ ಚಿಕಿತ್ಸೆ ನೀಡಿದ ಡಾ.ಸುರ್ಜಿತ್ ಪಾಲ್ ಸಿಂಗ್, ವೈದ್ಯಕೀಯ ಸಿಬ್ಬಂದಿ ರಾಜ್‍ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Exit mobile version