Visit Channel

ಗೌತಮ್ ಗಂಭೀರ್ ಯಾವ ಆಟಗಾರನ ಬಗ್ಗೆ ಆಕ್ರೋಶ ಹೊರಹಾಕಿದ್ರು ಗೊತ್ತಾ..?

17gauti-gambhir

ಭಾರತ ತಂಡ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ್​ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಆಫ್ರಿದಿ ನಡುವಿನ ಟ್ವೀಟ್​ ವಾರ್​ ಮತ್ತೆ ಶುರುವಾಗಿದೆ. ಕಾಶ್ಮೀರ ವಿಚಾರದ ಬಗ್ಗೆ ಟ್ವೀಟ್​ ಮಾಡಿದ್ದ ಅಫ್ರಿದಿಗೆ ಟ್ವೀಟ್​ ಮೂಲಕವೇ ಗಂಭೀರ್​ ಸಿಕ್ಸರ್​ ಬಾರಿಸಿದ್ದಾರೆ.

ಶಾಹಿದ್​ ಅಫ್ರಿದಿ ಬುಧವಾರ ಟ್ವಿಟ್ಟರ್​​ನಲ್ಲಿ”ದೇಶದ ಜನತೆಯಲ್ಲ ಪ್ರಧಾನ ಮಂತ್ರಿ ‘ಕಾಶ್ಮೀರ್​ ಅವರ್​’ ಕರೆಗೆ ಪ್ರತಿಕ್ರಿಯಿಸಬೇಕು. ನಾನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಝರ್​ ಇ ಕ್ವೈದ್​ಗೆ ಬರುತ್ತೇನೆ. ನಮ್ಮ ಕಾಶ್ಮೀರಿ ಸಹೋದರರೊಂದಿಗೆ ಒಗ್ಗಟ್ಟನ್ನು ತೋರಿಸಲು ನನ್ನ ಜೊತೆ ನೀವು ಸೇರಿಕೊಳ್ಳಿ. ಶೀಘ್ರದಲ್ಲೇ LOC (ಲೈನ್​ ಆಫ್​ ಕಂಟ್ರೋಲ್​)ಗೂ ಭೇಟಿ ನೀಡಲಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ನಿಂದ ಕೋಪಗೊಂಡಿರುವ ಗಂಭೀರ್​ ಅವರು ಅಫ್ರಿದಿ ಫೋಟೊ ಟ್ವೀಟ್​ ಮಾಡಿ, ಈ ಚಿತ್ರದಲ್ಲಿ ಶಾಹೀದ್​ ಅಫ್ರಿದಿ ಮುಜುಗರಕ್ಕೊಳಗಾಗುವುದಕ್ಕೆ ಏನು ಮಾಡಬೇಕು ಎಂದು ಶಾಹಿದ್​ ಆಫ್ರಿದಿಯನ್ನೇ ಕೇಳುತ್ತಿದ್ದಾನೆ. ಇದರಿಂದ ಶಾಹಿದ್ ಆಫ್ರಿದಿ ಪ್ರಬುದ್ಧನಾಗಲು ನಿರಾಕರಿಸಿದ್ದಾನೆ ಎಂಬುದರ ಬಗ್ಗೆ ನನಗಿದ್ದ ಅನುಮಾನಗಳು ಖಚಿತವಾಗಿವೆ. ಆತ ಪ್ರಬುದ್ಧನಾಗಲು ಆನ್​ಲೈನ್​ ಶಿಶುವಿಹಾರದ ಟ್ಯುಟೋರಿಯಲ್​ಗೆ ಸೇರಿಕೊಳ್ಳುವಂತೆ ಆದೇಶಿಸುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಫ್ರಿದಿ ಅಲ್ಲದೆ, ಜಾವೇದ್​ ಮಿಯಾಂದಾದ್​ ಜೊತೆಗೆ ಗಡಿ ನಿಯಂತ್ರಣ ರೇಖೆ(LOC)ಗೆ ಇತರೆ ಕ್ರೀಡಾಪಟುಗಳೊಂದಿಗೆ ಭೇಟಿ ನೀಡಿ ಶಾಂತಿ ಬಾವುಟ ಹಾರಿಸುವುದಾಗಿ ತಿಳಿಸಿದ್ದಾರೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.