ತಿಂಗಳುಗಳ ಹಿಂದಷ್ಟೇ ಅಕಾಲಿಕವಾಗಿ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ನಿಧನದ ನೋವು ಮಾಸುವ ಮುನ್ನವೇ, ಚಿರು ಆತ್ಮದ ವಿಷಯವಾಗಿ ಸಾಕಷ್ಟು ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ.
ಚಿರು ನಿಧನವಾದ ಕೆಲ ದಿನಗಳವರೆಗೂ ಅವರ ಅಂತ್ಯಸಂಸ್ಕಾರ ಮಾಡಿರುವ ಬೃಂದಾವನ ತೋಟದ ಮನೆಯಲ್ಲಿ ಹಾಗೂ ಅವರ ನಿವಾಸದ ಬಳಿ ಆತ್ಮ ಓಡಾಡುತ್ತಿದೆ ಎಂಬ ಸುದ್ದಿಯನ್ನು ಕೆಲವು ಕಿಡಿಗೇಡಿಗಳು ಎಲ್ಲೆಡೆ ಹಬ್ಬಿಸಿದ್ದರು. ಅದರ ಬೆನ್ನಲ್ಲೇ ವಿದೇಶಿ ಮೂಲದ ಪ್ಯಾರಾನಾರ್ಮಲ್ ತಜ್ಞನೊಬ್ಬ ತಾನು ಚಿರಂಜೀವಿ ಸರ್ಜಾ ಅವರ ಆತ್ಮದೊಂದಿಗೆ ಮಾತನಾಡಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಚಾರ್ಲಿ ಚಿಟ್ಟೆಂಡೆನ್ ಎಂಬಾತ ಚಿರು ಅವರ ಆತ್ಮದೊಂದಿಗೆ ಮಾತನಾಡಿರುವುದಾಗಿ ಸುದ್ದಿ ಹಬ್ಬಿಸಿದ್ದು, ಐಟಿಸಿ ರೀಸರ್ಚ್ ಡಿವೈಸ್ ಪಿಎಸ್ಬಿ7 ಮೂಲಕ ಚಿರು ಸರ್ಜಾ ಆತ್ಮದ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾನೆ. ಚಿರಂಜೀವಿ ಸರ್ಜಾ ಮೃತಪಟ್ಟ ಕೆಲವೇ ದಿನಗಳಲ್ಲಿ ಎಲ್ಲೆಡೆ ಹಬ್ಬಿದ ಚಿರು ಆತ್ಮದ ಕುರಿತಾದ ಊಹಾಪೋಹಗಳು, ಚಿರು ಅಭಿಮಾನಿಗಳು ಸೇರಿದಂತೆ ಹಲವರಲ್ಲಿ ಗೊಂದಲ ಮೂಡಿಸಿತ್ತು. ಇದೀಗ ವಿದೇಶಿ ಮೂಲದ ಪ್ಯಾರಾನಾರ್ಮಲ್ ಎಕ್ಸ್ಪರ್ಟ್ ಒಬ್ಬ ಇದೇ ವಿಷಯದ ಮೂಲಕ ಸುದ್ದಿಯಲ್ಲಿರುವುದು ಚಿರು ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ.