ನವದೆಹಲಿಯ ಪ್ರತಿಷ್ಠಿತ ಜೆ ಎನ್ ಯು ಕ್ಯಾಂಪಸ್ನಲ್ಲಿ ನಡೆದ ಭೀಕರ ಮಾರಾಮಾರಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಭೀಕರ ಹಲ್ಲೆಯಲ್ಲಿ ಇಬ್ಬರು ಶಸ್ತ್ರಧಾರಿ ಗೂಂಡಾಗಳ ಜೊತೆ ಕಪ್ಪು ಕೆಂಪು ಚೆಕ್ಸ್ ಶರ್ಟ್ ಧರಿಸಿದ ಯುವತಿ ಮುಂಚೂಣಿಯಲ್ಲಿದ್ಲು. ಈ ಹುಡುಗಿ ಬೆಂಗಳೂರು ಮೂಲದವಳೆಂಬ ಶಂಕೆ ವ್ಯಕ್ತವಾಗಿದ್ದು, ಈಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಭಾನುವಾರ ಸಂಜೆ ಮಾಸ್ಕ್ ಧಾರಿ ಗೂಂಡಾಗಳು ಹಠಾತ್ತಾಗಿ ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ರು. ಈ ದಾಳಿಯಲ್ಲಿ ಸುಮಾರು 25ದಕ್ಕೂ ಅಧಿಕ ಮಂದಿ ಗಾಯಗೊಂಡಿದ್ರು . ಈ ಮಾರಾಮಾರಿಯಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶ್ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಐಶ್ಘೋಷ್ ಸೇರಿ ಸುಮಾರು 18 ವಿದ್ಯಾರ್ಥಿಗಳನ್ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಹಿಂಸಾಚಾರದಲ್ಲಿ ಎಬಿವಿಪಿ ಸಂಘಟನೆಯ ಕೈವಾಡವಿದೆಯೆಂದು ಜೆಎನ್ಯು ವಿದ್ಯಾರ್ಥಿ ಸಂಘಟನೆ ಹೇಳಿಕೆ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಐಶ್ಘೋಷ್ ತಂದೆ ಹೇಳಿಕೆ ನೀಡಿದ್ದು; ಇಂದು ನನ್ನ ಮಗಳ ಮೇಲೆ ಹಲ್ಲೆಯಾಗಿದೆ. ನಾಳೆ ಮತ್ತೊಬ್ಬರ ಮೇಲೂ ಹಲ್ಲೆ ನಡೆಯಬಹುದು. ಮಾತ್ರವಲ್ಲ ನನ್ನ ಮೇಲೆಯೂ ಹಲ್ಲೆ ನಡೆಯಬಹುದು. ನಮಗೆ ಭಯವಾಗುತ್ತಿದೆ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ . ಸದ್ಯ ಕ್ಯಾಂಪಸ್ ಒಳಗೆ ವಿದ್ಯುತ್ ಕಡಿತಗೊಳಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಭದ್ರತೆ ನೀಡಿದ್ದಾರೆ. ಇತ್ತ ಪೊಲೀಸರು ಪ್ರತ್ಯಕ್ಷದರ್ಶಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೇಳಿಕೆ ಪ್ರಕಾರ, 50 ಕ್ಕೂ ಅಧಿಕ ಮಾಸ್ಕ್ ಧಾರಿಗಳು ಒಟ್ಟಿಗೆ ಕ್ಯಾಂಪಸ್ ಒಳಗೆ