ಟೀಂ ಇಂಡಿಯಾ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರೀ ಸೇರಿದಂತೆ ಆರು ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿ ಬಿಡುಗಡೆಯಾಗಿದೆ.
ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲೌ ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮಿ ಮೊಡಿ, ವೆಸ್ಟ್ ಇಂಡೀಸ್ ಮಾಜಿ ಆಲ್ ರೌಂಡರ್ ಮತ್ತು ಅಫ್ಘಾನಿಸ್ತಾನ ಕೋಚ್ ಫಿಲ್ ಸೈಮನ್ಸ್, ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪುತ್, ಮಾಜಿ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಮತ್ತು ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಈ ಪಟ್ಟಿಯಲ್ಲಿದ್ದಾರೆ.
ಮಾಜಿ ಕ್ರಿಕೆಟರ್ ಕಪೀಲ್ ದೇವ್ ನೇತೃತ್ವದಲ್ಲಿ ಕ್ರಿಕೆಟ್ ಸಲಹಾತ್ಮಕ ಸಮಿತಿ ಈ ವಾರದೊಳಗೆ ಅಥವಾ ಮುಂದಿನ ವಾರದ ಆರಂಭದಲ್ಲಿ ಒಬ್ಬರನ್ನು ಕೋಚ್ ಆಗಿ ನೇಮಕ ಮಾಡಲಿದೆ. ಕಪೀಲ್ ದೇವ್ ಹೊರತುಪಡಿಸಿದಂತೆ ಅಂಶುಮನ್ ಗಾಯಕ್ ವಾಡ್ ಹಾಗೂ ಮಾಜಿ ಮಹಿಳಾ ಕ್ರಿಕೆಟ್ ನಾಯಕಿ ಶಾಂತ ರಂಗಸ್ವಾಮಿ ಕ್ರಿಕೆಟ್ ಸಲಹಾತ್ಮಕ ಸಮಿತಿಯಲ್ಲಿದ್ದಾರೆ.