ನವದೆಹಲಿ,ಸೆ.16: ಕಳೆದ ಕೆಲವು ದಿನಗಳಿಂದ ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಗೆ ಮತ್ತೆ ಅಡೆತಡೆ ಉಂಟಾದಂತಿದೆ. ಜಾರಿ ನಿರ್ದೇಶನಾಲಯ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದೆ.
ಈಗಾಗ್ಲೇ ಅಧಿಕ ರಕ್ತದೊತ್ತಡದ ಕಾರಣದಿಂದ ಕಳೆದೆರಡು ದಿನಗಳಿಂದ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಕೆಶಿ, ಇಡಿ ಕಸ್ಟಡಿಯಿಂದ ನಾಳೆ ಮುಕ್ತರಾಗಲಿದ್ದಾರೆ. ಆದರೆ ಆರೋಗ್ಯದ ನೆಪ ಹೇಳುತ್ತಿರುವ ಡಿಕೆಶಿ ಹೊರಬಂದ ಕೂಡಲೇ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವುದಾಗಿ ಇಡಿ ತಿಳಿಸಿದೆ. ಈ ಕಾರಣದಿಂದ ಡಿಕೆಶಿಗೆ ಜಾಮೀನು ಕೊಡ್ಬೇಡಿ ಎಂದು ದೆಹಲಿ ಇಡಿ ವಿಶೇಷ ಕೋರ್ಟ್‍ಗೆ, ಇಡಿ ಮನವಿ ಮಾಡಿದೆ. ಮಾಜಿ ಸಂಸದ ಡಿ.ಕೆ.ಶಿವಕುಮಾರ್ ಆರೋಗ್ಯ ಸುಧಾರಣೆಗಯ ಬಳಿದ ಮತ್ತೆ ನ್ಯಾಯಾಂಗ ಬಂಧನಕ್ಕೆ ಕೊಡಿ, ತನಿಖೆ ಶುರು ಮಾಡ್ತೀವಿ ಎಂಬುದು ಇಡಿ ಆಕ್ಷೇಪಣೆಯ ಸಾರಾಂಶವಾಗಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ 14 ದಿನಗಳಿಂದ ಇಡಿ ಕಸ್ಟಡಿಯಲ್ಲಿದ್ದ ಡಿಕೆಶಿಗೆ ಕೋರ್ಟ್ ಒಂದೋ ಜಾಮೀನು ನೀಡಬಹುದು ಇಲ್ವಾದರೆ ನ್ಯಾಯಾಂಗ ಬಂಧನಕ್ಕೆ ಕೊಡುವುದು ಬಿಟ್ಟರೆ ಮತ್ತಿನ್ಯಾವ ಆಯ್ಕೆ ಇರದು.