ಮೈಸೂರು,ಸೆ.4 : ಮಾಜಿ ಸಚಿವ ಡಿಕೆಶಿ ಇಡಿ ಬಂಧನ ವಿಚಾರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಸೇಡಿನಿಂದ ಡಿಕೆಶಿ ಬಂಧನವಾಗಿದೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಹೀಗೆ ಮಾಡ್ತಿದೆ. ಕಾಂಗ್ರೆಸ್ ನಾಯಕರನ್ನು ಒಬ್ಬೊಬ್ಬರನ್ನಾಗಿ ಮುಗಿಸಲು ಹೀಗೆ ಮಾಡ್ತಿದ್ದಾರೆ.ವಿರೋಧ ಪಕ್ಷದವರನ್ನಹ ಮುಗಿಸುವ ಉದ್ದೇಶ ಇದೆ ಬಿಜೆಪಿಗೆ ಅದು ಸಾಧ್ಯವಿಲ್ಲ.ನಾವು ಇದನ್ನು ಖಂಡಿಸಿ ಪ್ರತಿಭಟನೆ ಮಾಡ್ತಿವಿ. ಕಾಂಗ್ರೆಸ್ ಪಕ್ಷ ಕಾನೂನಾತ್ಮಕ ವಾಗಿ ಡಿಕೆಶಿ ಪರ ನಿಲ್ಲುತ್ತೇವೆ.
ಡಿಕೆಶಿ ಯಾವುದೇ ಸಮನ್ಸ್ ಉಲ್ಲಂಘನೆ ಮಾಡಿಲ್ಲ. ಅವರನ್ನು ಬಂಧನ ಮಾಡುವ ಅವಶ್ಯಕತೆ ಇರ್ಲಿಲ್ಲ. ಕೇಂದ್ರ ಸರ್ಕಾರ ಈ ಕೆಲಸ ಮಾಡ್ತಿದ್ದೆ. ಯಡಿಯೂರಪ್ಪ ಇವೆಲ್ಲವನ್ನೂ ಗೊತ್ತಿಲ್ಲದೆ ಮಾಡ್ತಿದ್ದಾರಾ..ಅಲ್ಲಾ ಗೊತ್ತಿದ್ದೋ ಏನೋ ತಿಳಿಯುತ್ತಿಲ್ಲ. ಅವರು ಇದಕ್ಕೂ ನಮಗೂ ಸಂಬಂಧ ಇಲ್ಲ ಅಂತಾರೆ. ಇದು ಕೇವಲ ರಾಜಕೀಯವಾಗಿ ಅವರು ಹೀಗೆ ಮಾತಾಡ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಗಂಭಿರ ಆರೋಪ ಮಾಡಿದ್ದಾರೆ.
ನಾಲ್ಕು ದಿನ ವಿಚಾರಣೆ ನಡೆಸಿದ್ದಾಗ ಉತ್ತರ ಕೊಡ್ದವರು,ಈಗ ಬಂಧನ ಮಾಡ್ಬಿಟ್ರೆ ಉತ್ತರ ಕೊಡ್ಬಿಡ್ತಾರಾ ಹೇಳಿ.ಚಿದಂಬರಂ ಹಾಗೂ ಡಿಕೆಶಿ ಕೇಸ್ ಗಳು ಬೇರೆ ಬೇರೆ ಆದ್ರೆ ಅವರಿಬ್ವರ ಬಂಧನ ರಾಜಕೀಯ ಪ್ರೇರಿತ ಎಂಬುದಾಗಿ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.