vijaya times advertisements
Visit Channel

ನಟ ಕೋಮಲ್ ಮೇಳೆ ಹಲ್ಲೆ; ಕಿಚ್ಚನ ಹೆಸರನ್ನು ಬಳಸ್ತಿರೋದಕ್ಕೆ ಜಗ್ಗೇಶ್ ಕೊಟ್ಟ ಉತ್ತರವೇನು..?

download-1

ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸಹೋದರ ಕೋಮಲ್ ಮೇಲೆ ಹಾಡುಹಗಲೆ ನಡೆದ ಹಲ್ಲೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಮಗಳನ್ನು ಕರೆದುಕೊಂಡು ಹೋಗುತ್ತಿದ್ದ ಕೋಮಲ್ ಮೇಲೆ ಏಕಾಏಕಿ ದಾಳಿ ನಡೆದಿದರ ಹಿಂದೆ ವ್ಯವಸ್ಥಿತ ಸಂಚೊಂದು ಕೆಲಸ ಮಾಡಿದೆಯಾ? ಪ್ರಶ್ನೆಗಳು ಹುಟ್ಟಲು ಅದರದ್ದೇ ಆದ ಕಾರಣಗಳೂ ಇವೆ.

ಘಟನೆ ಬಳಿಕ ಮಾಧ್ಯಮಗಳಿಗೆ ನಟ ಕೋಮಲ್ ನೀಡಿದ ಹೇಳಿಕೆ ಮೂಲ ಕಾರಣಗಳಲ್ಲೊಂದು. “ಕೆಂಪೇಗೌಡ-2 ಸಿನಿಮಾ ಮಾಡಿದ ನಂತರ ತಲೆನೋವು ಜಾಸ್ತಿ ಆಗಿದೆ. “ಕಾರಿನಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಟಚ್ ಮಾಡುತ್ತಲೆ, ಕೆಟ್ಟಪದಗಳಿಂದ ಬೈಯುತ್ತ ಬಂದಿದ್ದಾರೆ. ನಂತರ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಹಲ್ಲೆ ಮಾಡಿದ್ದಾರೆ. ಯಾರು ಅಂತ ಗೊತ್ತಿಲ್ಲ. ಇತ್ತೀಚಿಗೆ ಸಿನಿಮಾ ರಿಲೀಸ್ ಆದ ಮೇಲೆ ನಾನಾತರಹದ ಟೆನ್ಷನ್ ಇದೆ. ಸಿನಿಮಾ ಯಾಕೆ ಮಾಡಿದೆ ಅಂತ ಅನಿಸುತ್ತಿದೆ. ಏನು ಮಾಡಬೇಕು ಅಂತ ಗೊತ್ತಿಲ್ಲ. ಇಂಡಸ್ಟ್ರಿಯವರೇ ಅಥವಾ ಬೇರೆ ಯಾರೋ ಎಂದು ಗೊತ್ತಿಲ್ಲ. ಯಾರ ಮೇಲೂ ಅನುಮಾನ ಪಡಲ್ಲ. ದೇವರು ಅಂತ ಇದ್ದಾನೆ ನೋಡಿಕೊಳ್ಳುತ್ತಾನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಒಂದು ಕಡೆ ಕೋಮಲ್ ತಮ್ಮದೇ ಕ್ಷೇತ್ರದ ಜನರ ಮೇಲೆ ಅನುಮಾನ ಹೊರಹಾಕಿದ್ದಾರೆ. ಮತ್ತೊಂದೆಡೆ ಕೋಮಲ್ ಅಣ್ಣ, ರಾಜಕಾರಣಿಯೂ ಆಗಿರುವ ಜಗ್ಗೇಶ್ ಹೇಳಿಕೆ ಕೂಡ ಇದೇ ಹಾದಿಯಲ್ಲಿದೆ. ಚಿತ್ರರಂಗದವರು ಮಾಡಿದ್ರೆ ಸುಮ್ಮನೆ ಬಿಡಲ್ಲ ಎಂದು ಜಗ್ಗೇಶ್ ಎಚ್ಚರಿಕೆ ನೀಡಿರುವುದು ಯಾರಿಗೆ? ಅವರ ಈ ಮಾತುಗಳನ್ನು ಕೇಳಿದ್ರೆ ಚಿತ್ರರಂಗದ ಕಡೆಯಿಂದಲೇ ಕೋಮಲ್ ಮೇಲೆ ಹಲ್ಲೆ ನಡೆದಿರಬಹುದಾ? ಎಂಬ ಅನುಮಾನ ಕಾಡುತ್ತದೆ.

ಸುದೀಪ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಕೆಂಪೇಗೌಡ ಹೆಸರಿನ ಸಿನಿಮಾ ಮಾಡಿದ್ದೆ ಇದಕ್ಕೆಲ್ಲ ಕಾರಣ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿದ್ದಂತೆ ನಟ ಜಗ್ಗೇಶ್ “ನನ್ನ ಕಲಾಬಂಧು, ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲಾ. ಸುದೀಪ್ ನನ್ನ ಒಡಹುಟ್ಟದಿದ್ದರು ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ. ಕೆಡಿಸದಿರಿ ಮನಗಳು” ಎಂದು ಹೇಳಿದ್ದಾರೆ.

ಪೊಲೀಸರು ಹೇಳಿದ್ದೇನು?

ಈ ಘಟನೆಯ ಬಗ್ಗೆ ಮಾತನಾಡಿರುವ ಡಿಸಿಪಿ ಶಶಿಕುಮಾರ್, ಹಲ್ಲೆ ಮಾಡಿರುವ ವ್ಯಕ್ತಿ ವಿಜಿ ಎಂದು ತಿಳಿಸಿದ್ದಾರೆ. ”ಈತ ಶ್ರೀರಾಮ್ ಪುರದ ನಿವಾಸಿಯಾಗಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಸದ್ಯ 307 ಕೇಸ್ ಅನ್ನು ದಾಖಲು ಮಾಡಲಾಗಿದೆ.” ಎಂದು ಹೇಳಿದ್ದಾರೆ.ಈತ ಯಾರು? ಈತನಿಗೂ ಸಿನೆಮಾ ಜಗತ್ತಿಗೂ ಏನಾದರೂ ಸಂಬಂಧ ಇದೆಯಾ? ಇವೆಲ್ಲಕ್ಕೂ ಪೊಲೀಸರ ತನಿಖೆಯೇ ಉತ್ತರಿಸಬೇಕಿದೆ.

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.