ಬೆಂಗಳೂರು, ಡಿ18: ರಾಜಕಾರಣಿಗಳು ವಿಶ್ರಾಂತಿಗಾಗಿ ಆಗಾಗ ತಮ್ಮ ಕ್ಷೇತ್ರದಿಂದ
ದೂರ ಉಳಿಯೋದು ಸಾಮಾನ್ಯ ವಿಚಾರ. ಸದ್ಯ ಈ ಸರದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು..ಹೌದು..ಸಿದ್ದು ಮುಂದಿನ ನಾಲ್ಕೈದು ದಿನಗಳ ಕಾಲ ಬೆಂಗಳೂರಿನಲ್ಲಿ ಇರೋದಿಲ್ವಂತೆ.. ಅನಾಮದೇಯ ಸ್ಥಳಕ್ಕೆ ತೆರಳಲಿದ್ದಾರಂತೆ.. ಕಳೆದ ವಾರ ಅವರು ಬೆಂಗಳೂರಿನ ವೇಗಾಸ್ ಆಸ್ಪತ್ರೆಯಲ್ಲಿ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸೋಮವಾರ ಮನೆ ಸೇರಿದ್ದ ಸಿದ್ದರಾಮಯ್ಯ ಅವರಿಗೆ ಇನ್ನೂ ಕೆಲಕಾಲ ವಿಶ್ರಾಂತಿಯನ್ನು ವೈದ್ಯರು ಸೂಚಿಸಿದ್ದರು. ಆದರೆ, ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಸಿಗಳು ಅವರನ್ನು ಭೇಟಿಯಾಗಲು ತಂಡೋಪತಂಡವಾಗಿ ಬರುತ್ತಿರುವುದರಿಂದ ಅವರಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ ಸಿಗುತ್ತಿಲ್ಲ.
ಆದ್ದರಿಂದ ಅವರು ನಾಲ್ಕೈದು ದಿನ ಬೆಂಗಳೂರಿನಿಂದ ಹೊರಗಡೆ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಮುಂದಿನ ನಾಲ್ಕು ದಿನ ಲಭ್ಯರಿರುವುದಿಲ್ಲ. ನಂತರ ಎಂದಿನಂತೆ ಭೇಟಿಯಾಗಲಿದ್ದಾರೆ ಎಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.