vijaya times advertisements
Visit Channel

ನೆಟ್ಟಿಗರಿಂದ ಭೇಷ್ ಅನ್ನಿಸಿಕೊಂಡ ಕೊಹ್ಲಿ ಪತ್ನಿ: ಯಾಕೆ ಗೊತ್ತಾ..?

2anushka-sharma-1557984922-1566477029

ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲು ತೊಡಗಿಸಿಕೊಂಡಿರುವ ನಟಿ ಅನುಷ್ಕಾ ಶರ್ಮಾ, ಇತ್ತೀಚಿಗಷ್ಟೆ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. 1.29 ನಿಮಿಷದ ಈ ವಿಡಿಯೋ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿದೆ. ಕೊನೆಯಲ್ಲಿ ‘ದಟ್ಸ್ ಇಟ್’ ಎನ್ನುವ ಜಾಗದಲ್ಲಿ ‘ಅಷ್ಟೇ’ ಎಂದು ಕನ್ನಡದಲ್ಲಿ ಹೇಳಿ ಕೈಮುಗಿದಿದ್ದಾರೆ.

ಅನುಷ್ಕಾ ಬಳಸಿದ್ದು ಕನ್ನಡವೇನಾ? ಅನುಷ್ಕಾ ಶರ್ಮಾ ‘ಅಷ್ಟೇ’ ಎಂಬ ಕನ್ನಡ ಪದ ಬಳಸಿರುವುದರಿಂದ ಈ ವಿಡಿಯೋ ಕನ್ನಡಿಗರ ಗಮನ ಸೆಳೆದಿದೆ. ಗೊತ್ತಿದ್ದಿ ಹೇಳಿದ್ರಾ, ಗೊತ್ತಿಲ್ಲದೇ ಹೇಳಿದ್ರಾ ಅನುಷ್ಕಾ ಅವರು ‘ಅಷ್ಟೇ’ ಎಂಬ ಪದದ ಅರ್ಥ ಗೊತ್ತಿದ್ದು ಹಾಗೆ ಹೇಳಿದ್ರಾ ಅಥವಾ ಏನೋ ಹೇಳಲು ಹೋಗಿ ಹಾಗೆ ಹೇಳಿರಬಹುದು ಎಂದು ಯೋಚಿಸಿದರೂ, ಅದು ಉದ್ದೇಶ ಪೂರ್ವಕವಾಗಿ ‘ಅಷ್ಟೇ’ ಎಂದಂತೆ ಇದೆ. ಕೊನೆಯಲ್ಲಿ ಕೈಮುಗಿದು ಅಷ್ಟೇ ಎಂದಿರುವುದನ್ನ ಗಮನಿಸಿದ್ರೆ ಇದು ಕನ್ನಡ ಪದ ಎಂದು ಗೊತ್ತಿದ್ದೆ ಹೇಳಿದ್ದಾರೆ ಎಂಬುದು ಖಾತ್ರಿಯಾಗಿದೆ.

ಅಯೋಧ್ಯೆ ಕುವರಿ, ಬೆಂಗಳೂರಿನ ನಂಟು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ ಶರ್ಮಾ, ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಓದಿದ್ದರು. ನಂತರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅಲ್ಲಿಂದ ಮುಂಬೈಗೆ ಬಂದ ಅನುಷ್ಕಾ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ, ನಂತರ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದಾರೆ.

ಸೋ, ಶಿಕ್ಷಣವನ್ನ ಬೆಂಗಳೂರಿನಲ್ಲಿ ಕಲಿತ ಹಿನ್ನೆಲೆ ಅನುಷ್ಕಾ ಶರ್ಮಾಗೆ ಕನ್ನಡ ಬರುತ್ತೆ. ಹೀಗಾಗಿ, ಬೆಂಗಳೂರಿನ ಜೊತೆ ಅನುಷ್ಕಾಗೆ ಹೆಚ್ಚು ನಂಟಿದೆ. ಮತ್ತೊಂದೆಡೆ ಕಳೆದ ಒಂದು ದಶಕದಿಂದ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರನಾಗಿ ಐಪಿಎಲ್ ಆಡುತ್ತಿದ್ದಾರೆ. ಆಗಲೂ ಪಂದ್ಯಗಳನ್ನ ನೋಡಲು ಅನುಷ್ಕಾ ಬೆಂಗಳೂರಿಗೆ ಬರ್ತಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.