ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ದಾಖಲೆ ಮೆರೆದು ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಭಾರತದ ಹೆಮ್ಮೆಯ ಆಟಗಾರ್ತಿ ಪಿ.ವಿ.ಸಿಂಧು. ಮುತ್ತಿನ ನಗರಿಯ ಈ ಕುವರಿಯನ್ನು ಸದ್ಯ ಇಡೀ ಭಾರತವೇ ಕೊಂಡಾಡುತ್ತಿದೆ. ಈ ನಡುವೆ ಕಳೆದ ಒಂದು ವರ್ಷದಿಂದನೆ ಪಿ.ವಿ ಸಿಂಧು ಬಯೋಪಿಕ್ ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ.
ವಿಶೇಷ ಅಂದ್ರೆ ಸಿಂಧು ಅವರ ಜೀವನಾಧಾರಿತ ಚಿತ್ರದಲ್ಲಿ ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರವನ್ನು ಖಿಲಾಡಿ ಅಕ್ಷಯ್ ಕುಮಾರ್ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಗೋಪಿಚಂದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ಅಕ್ಷಯ್ ಕುಮಾರ್ ಎಂದರೆ ಇಷ್ಟ. ನಾನು ಇಷ್ಟಪಡುವ ವ್ಯಕ್ತಿಗಳಲ್ಲಿ ಅವರು ಒಬ್ಬರು. ನನ್ನ ಪಾತ್ರ ಮಾಡಿದ್ದರೆ ಅದ್ಭುತವಾಗಿರುತ್ತೆ. ಆದ್ರೆ ಬಯೋಪಿಕ್ ಬಗ್ಗೆ ನನಗೆ ಸ್ಪಷ್ಟನೆ ಇಲ್ಲ” ಎಂದು ಹೇಳಿದ್ದಾರೆ.
ಒಟ್ನಲ್ಲಿ ಈ ಬಯೋಪಿಕ್ ನಲ್ಲಿ ಸಿಂಧು ಪಾತ್ರಧಾರಿ ಯಾರಾಗ್ತಾರೆ ಎಂಬುದು ಮಾತ್ರ ಸದ್ಯ ಎಲ್ಲರ ಕೇಂದ್ರಬಿಂದುವಾಗಿ ಉಳಿದಿರುವ ಪ್ರಶ್ನೆ..