ಪಾಕಿಸ್ಥಾನದಲ್ಲಿ ಭಗವಾನ್ ವಿಷ್ಣುವಿನ ಪುರಾತನ ದೇವಾಲಯ ಪತ್ತೆ

Share on facebook
Share on google
Share on twitter
Share on linkedin
Share on print

ಪೇಶಾವರ್‌, ನ. 21:     ಸುಮಾರು 1,300 ವರ್ಷಗಳ ಹಿಂದಿನ  ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಪತ್ತೆಯಾಗಿದೆ.

ಇದೊಂದು ವಿಷ್ಣುವಿನ ದೇವಾಲಯವಾಗಿದ್ದು ಇದನ್ನು ಹಿಂದೂಶಾಹಿ ಅವಧಿಯಲ್ಲಿ1,300 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾಗಿ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲೀಕ್ ಹೇಳಿದ್ದಾರೆ. ಈ ದೇವಾಲಯದ ಸಮೀಪ ಒಂದು ಬಾವಿ ಇದ್ದು ಇಲ್ಲಿ ಪೂಜೆಗೂ ಮುನ್ನ ಸ್ನಾನಕ್ಕಾಗಿ ಈ ಬಾವಿಯನ್ನು ಬಳಸುತ್ತಿದ್ದರು ಎಂಬುದು ತಿಳಿಯುತ್ತದೆ.

ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಫಜಲ್ ಖಲೀಕ್ ಹೇಳಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥರಾದ ಡಾ. ಲೂಕ ಅವರು ಹೇಳಿದ್ದಾರೆ.

Submit Your Article