ಈಗಂತೂ ಎಲ್ಲಿನೋಡಿದರೂ ಪೈಲ್ವಾನ್ ಚಿತ್ರದ್ದೇ ಹವಾ..ಒಂದ್ಕಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ, ಹಾಡು, ಕುಣಿತ, ಫೈಟಿಂಗ್ ಸೀನ್ಸ್ ಗೆ ಅಭಿಮಾನಿಗಳು ಫಿದಾ ಆದರೆ ಮತ್ತೊಂದ್ಕಡೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಕನ್ನಡಿಗರಿಗೆ ಪರಿಚಿತರಾಗಿರುವ ಆಕಾಂಕ್ಷಾ ಸಿಂಗ್ ಮುದ್ದು ಮುಖಕ್ಕೂ ಜನ ಮಾರುಹೋಗಿದ್ದಾರೆ..ಆದರೆ ಆಕಾಂಕ್ಷಾ ವಿವಾಹಿತರು ಎಂಬುದೇ ಪಡ್ಡೆಗಳ ಬೇಸರಕ್ಕೆ ಕಾರಣವಾಗಿದೆ…ಅಷ್ಟಕ್ಕೂ ಆಕಾಂಕ್ಷಾ ರಿಯಲ್ ಲೈಫ್ ಪತಿ ಯಾರು ಗೊತ್ತಾ..?
ಯಸ್..2014ರಲ್ಲಿ ಕುನಾಲ್ ಸಏನ್ ಎಂಬವರೊಂದಿಗೆ ಸಪ್ತಪದಿ ತುಳಿದಿದ್ದ ಈ ನಟಿ, ನಂತರದಲ್ಲೂ ಸಿನಿ ರಂಗದಲ್ಲಿ ತೊಡಗಿಸಿಕೊಂಡವರು..ಪತಿ ಹಾಗೂ ಕುಟುಂಬದವರ ಸಹಕಾರದೊಂದಿಗೆ ಹಿಂದಿ ಕಿರುತೆರೆಯಲ್ಲೇ ಹೆಚ್ಚು ಗುರುತಿಸಿಕೊಂಡರು..ಅಲ್ಲದೆ ಹಿಂದಿಯಲ್ಲಿ ಬದ್ರಿನಾಥ್ ಕಿ ದುಲ್ಹಾನಿಯಾ', ತೆಲುಗಿನಲ್ಲಿ
ಮಳ್ಳಿ ರಾವ’, `ದೇವದಾಸ’ ಚಿತ್ರಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.