ಕರೋನಾ ಮಹಾಮಾರಿ ರೋಗ ಇಡೀ ವಿಶ್ವಕ್ಕೆ ಹರಡಿದ್ದು ವಿಶ್ವಕ್ಕೆ ವಿಶ್ವವೇ ಲಾಕ್‍ಡೌನ್ ಆಗಿದೆ. ದೇಶದಲ್ಲಿ ಜನರನ್ನು ನಿಯಂತ್ರಿಸಲು ಒಂದೆಡೆ ವೈದ್ಯರು , ಪೊಲೀಸರು ಹರಸಾಹಸ ಪಡುತ್ತಿದ್ರೆ ಇತ್ತ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಬಿಎಸ್‍ಎಫ್ ಯೋಧರು ಸತತ ಕಾರ್ಯಚರಣೆ ನಡೆಸುತ್ತಿದ್ದಾರೆ.ಆದ್ರೆ ಕಾರ್ಯಚರಣೆ ನಡುವೆ ಇದೀಗ ಯೋಧರಿಗೂ ಕೊರೋನಾ ವೈರಸ್ ವಕ್ಕರಿಸಿದೆ.
ಕಳೆದ ಮೂರು ದಿನದಲ್ಲಿ ಬಿಎಸ್‍ಎಫ್ ಯೋಧರಲ್ಲಿ 156 ಕೊರೋನಾ ಕೇಸ್‍ಗಳು ದೃಢಪಟ್ಟಿದ್ದುಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದ್ರೆ ಅದರ ಬೆನ್ನಲೆ ಶುಕ್ರವಾರ ಒಂದೇ ದಿವಸಕ್ಕೆ 30 ಯೋಧರಿಗೆ ಕೊರೋನಾ ವೈರಸ್ ಪತ್ತೆಯಾಗಿದ್ದು ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.ಈ ಮೂಲಕ ಇದೀಗ ಕೊರೋನಾ ಸೋಂಕಿತ ಬಿಎಸ್‍ಎಫ್ ಯೋಧರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ .
ಇನ್ನು ಕೊರೋನಾ ಕೇಸ್ ದಾಖಲಾದವರಲ್ಲಿ 24 ಜನ್ರು ತ್ರಿಪುರದವರೆಂದು ಗೊತ್ತಾಗಿದ್ದು ಇನ್ನುಳಿದಂತೆ 6 ಜನ ದೆಹಲಿಯವರೆಂದು ಗೊತ್ತಾಗಿದೆ. ಈ ಹಿನ್ನಲೆ ದೆಹಲಿಯ ಬಿಎಸ್‍ಎಫ್ ಮುಖ್ಯ ಕಛೇರಿಯ ಮತ್ತೊಂದು ಅಂತಸ್ಥಿನ ಮಹಡಿಯನ್ನು ಸೀಲ್‍ಡೌನ್ ಮಾಡಲಾಗಿದೆ.ಅಂದಹಾಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪೈಕಿ ಬಿಎಸ್‍ಎಫ್ ಇಲಾಖೆಯಲ್ಲಿ
ಅತೀ ಹೆಚ್ಚು ಸೋಂಕು ದೃಢಪಟ್ಟಿದ್ದು ಕೇವಲ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿಯೇ 500 ಪ್ರಕರಣಗಳು ದಾಖಲಾಗಿದೆ.