ಬಿಎಸ್ ವೈಗೆ ಮಗ್ಗುಲ ಮುಳ್ಳಾದ ಮಾಧುಸ್ವಾಮಿ..!

ಬೆಂಗಳೂರು,ನ.21: ಬಿಎಪಿಗೆ ಅಳಿವು ಉಳಿವಿನ ಚುನಾವಣೆ ಸಮಯದಲ್ಲಿ ಮಾಧುಸ್ವಾಮಿ ಮಾಡಿರೋ ಕಾಂಟ್ರವರ್ಸಿಯಿಂದಾಗಿ ಬಿಜೆಪಿಯ ಬುಡಕ್ಕೆ ಬೆಂಕಿ ಬೀಳುತ್ತಾ ಅನ್ನುವ ಲೆಕ್ಕಾಚಾರಗಳು ಶುರುವಾಗಿದೆ. ಮಾಧುಸ್ವಾಮಿಯ ಮೊಂಡುತನದ ಮಾತನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗ್ತಿದೆ. ಸಿದ್ದರಾಮಯ್ಯ ಸಹ ಈ ಸಂದರ್ಭವನ್ನು ಎನ್ ಕ್ಯಾಶ್ ಮಾಡಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆ ತೀವ್ರ ಕಾವು ಪಡೆಯೋದಕ್ಕೆ ಸಿದ್ದರಾಮಯ್ಯನವರ ಪರೋಕ್ಷ ಬೆಂಬಲವೂ ಕಾರಣ ಎಂದು ಹೇಳಲಾಗುತ್ತಿದೆ.

ಹಾಗಾಗಿಯೇ ಉರುಬ ಸಮಾಜದ ಸ್ವಾಮೀಜಿಯ ಬಗ್ಗೆ ನಾಲಗೆ ಹರಿಯಬಿಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಈಗಾಗ್ಲೇ ಕೆ.ಆರ್ ಪುರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಮಾಧುಸ್ವಾಮಿ ಕೈಯಿಂದ ಹಿಂಪಡೆದಿರುವ ಬಿಎಸ್ ವೈ ಸಚಿವರ ತಲೆದಂಡಕ್ಕೂ ಮುಂದಾಗ್ತಾರಾ ಎಂಬ ಕುತೂಹಲ ಎದ್ದಿದೆ.

Exit mobile version