ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಗಳಿಸಿರುವ ಬಿಗ್ ಬಾಸ್ ಸೀಸನ್ಸ್ ಮುಂದುವರಿಯುತ್ತಲೇ ಇದೆ. ಬಿಗ್ ಬಾಸ್ ಸೀಸನ್-6 ಯಶಸ್ವಿಯಾಗಿ ಪೂರೈಸಿದ ನಂತರ ಇದೀಗ ಬಿಗ್ ಬಾಸ್ ಸೀಸನ್-7 ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸತತ 6 ಬಾರಿಗೆ ಬಿಗ್ ಬಾಸ್ ಸೀಸನ್ ಗಳನ್ನು ನಡೆಸಿಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈ ಬಾರಿಗೂ ತಮ್ಮ ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ಸೀಸನ್ 7ರನ್ನು ನಡೆಸಿಕೊಡಲಿದ್ದು, ಪ್ರೇಕ್ಷಕರ ಕಾತುರತೆ ಹೆಚ್ಚಿಸಿದೆ.
ಈ ಬಗ್ಗೆ ಪ್ರೇಕ್ಷಕ ಪ್ರಭುಗಳು ಸಾಮಾಜಿಕ ಜಾಲತಾಣದಲ್ಲಿ, ಯಾವಾಗ ಬಿಗ್ ಬಾಸ್ ಸೀಸನ್ 7 ಶುರು ಎಂಬುದಾಗಿ ಕಿಚ್ಚನನ್ನು ಪ್ರಶ್ನಿಸಿದ್ದು, ಖುದ್ದು ಸುದೀಪ್ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಕ್ಟೋಬರ್ 2ನೇ ವಾರದಿಂದ ಕಲರ್ಸ್ ಸೂಪರ್ ಗೆ ಬದಲಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿ ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗಲಿದೆ ಎಂಬ ಉತ್ತರವನ್ನು ಕೊಡುವ ಮೂಲಕ ಅಭಿಮಾನಿಗಳಲ್ಲಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.