ಬೆಂಗಳೂರು: ಸುಮಾರು ೫೦೦ ಮಕ್ಕಳೊಂದಿಗೆ ಕೋಣನಕುಂಟೆಯ ಖಾಸಗಿ ಶಾಲಾ ಆವರಣದಲ್ಲಿ ಚೆಸ್ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ೧೪ನೇ ವಯಸ್ಸಿನ ನಿಹಾಲ್ ಸೆರಿನ್ ಮಾಡಿದರು.
ನಿನ್ನೆಯಿಂದ ಅಕ್ಷಯಕಲ್ಪ ಕರ್ನಾಟಕ ರಾಜ್ಯ ಓಪನ್ ಚೆಸ್ ಚಾಂಪಿಯನ್ಷಿಪ್ 2019 ಪಂದ್ಯಾಟ ಕೋಣನಕುಂಟೆಯ ಸಿಲಿಕಾನ್ ಅಕಾಡೆಮಿಯಲ್ಲಿ ನಡೆಯುತ್ತಿದ್ದು ಇಂದು ನಿಹಾಲ್ ಸರಿನ್ ಇಲ್ಲಿಯ ಕೇಂದ್ರ ಆಕರ್ಷಕ ಬಿಂದು ಆಗಿದ್ದರು. ಪಂದ್ಯಾಟಕ್ಕೆ ಆಗಮಿಸಿದ ಎಲ್ಲ ಸ್ಪರ್ದಿಗಳು ಹಾಗೂ ಪೋಷಕರ ಜೊತೆ ಸಂವಾದ ನಡೆಸಿದ ನಿಹಾನ್ ಸೆರಿನ್ ಕೆಲ ಕಾಲ ಚೆಸ್ ಆಸಕ್ತ ಮಕ್ಕಳಿಗೆ ಚೆಸ್ ಮೂವ್ ಬಗ್ಗೆ ಪಾಠ ಹೇಳಿಕೊಟ್ಟರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಹಾಲ್ ಸರಿನ್ ಹೇಳಿದರು,”ಕಳೆದ ವರ್ಷ ವಿಶ್ವನಾಥ್ ಆನಂದ್ ಜೊತೆ ಚೆಸ್ ಪಂದ್ಯ ಆಟವಾಡಿದ್ದೆ ಹಾಗು ಅದು ಡ್ರಾ ಆಗಿತ್ತು. ಇದು ನನ್ನನ್ನು ಬಲಗೊಳಿಸಿದೆ. ನಾನು ಸ್ವಲ್ಪ ನರ್ವಸ್ ಆಗಿದ್ದೆ ಆದರೆ ಈಗ ಇನ್ನು ಛಲ ಜಾಸ್ತಿಯಾಗಿದೆ. ಅಕ್ಟೋಬರ್ ೧೦ ರಿಂದ ಫಿಡೆ ಗ್ರಾಂಡ್ ಸ್ವಿಸ್ ನಲ್ಲಿ ಐಸ್ಲೆ of ಮ್ಯಾನ್ ಆಯೋಜಿತ್ ಪಂದ್ಯಾಟದಲ್ಲಿ ಭಾಗಿಯಾಗಲಿದ್ದೇನೆ,” ಎಂದರು.
ಭಾರತ ಹಾಗೂ ಬೆಂಗಳೂರು ನಗರದಲ್ಲಿ ಚೆಸ್ ಗೆ ಬೇಡಿಕೆ ಬಗ್ಗೆ ಮಾತಾಡಿ,” ಬೆಂಗಳೂರು ನಗರದಲ್ಲಿ ಚೆಸ್ ಆಟಕ್ಕೆ ಬೇಡಿಕೆ ಹೆಚ್ಚಿದೆ. ಮಕ್ಕಳು ತಮ್ಮನ್ನು ಸ್ಪರ್ಧಾ ಪರೀಕ್ಷೆಗೆ ತಯಾರಿ ಮಾಡಿಕೊಳ್ಳೋ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚೆಸ್ ಆಟವನ್ನು ಅಡ್ತ ಇದಾರೆ. ನನ್ನ ಆಟವನ್ನು ಮೆಚ್ಚಿ ಈಗ ನನಗೆ ಪ್ರೋತ್ಸಾಹಿಸಲು ಈಗ ಅಕ್ಷಯಕಲ್ಪ ಸಂಸ್ಥೆ ಮುಂದೆ ಬಂದಿದೆ,” ಎಂದರು.
ಐದು ದಿನಗಳ ಅಕ್ಷಯಕಲ್ಪ ಕರ್ನಾಟಕ ರಾಜ್ಯ ಓಪನ್ ಚೆಸ್ ಚಾಂಪಿಯನ್ಷಿಪ್ 2019 ಪಂದ್ಯಾಟ ಸಿಲಿಕಾನ್ ಅಕಾಡೆಮಿ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಭುಧವಾರದಿಂದ ನಡೆಯುತ್ತಿದೆ. . ಐದು ದಿನಗಳ ಪಂದ್ಯಾಟ ದ ಬಗ್ಗೆ ಮಾತನಾಡಿದ ಟೋನಿ ಪಿಂಟೋ, ಮುಖ್ಯ ಆರ್ಥಿಕ ಅಧಿಕಾರಿ, ಅಕ್ಷಯಕಲ್ಪ ಹೇಳಿದರು,” ಸಂಸ್ಥೆ ಮಕ್ಕಳ ಬುದ್ದಿಯ ಜೊತೆ ಅವರ ಸಂಪೂರ್ಣ ಬೆಳವಣಿಗೆ ಮೇಲೆ ಅಭಿರುಚಿ ಹೊಂದಿದೆ. ಇದೇ ಕಾರಣಕ್ಕೆ ಅಕ್ಷಯಕಲ್ಪ ಚೆಸ್ ಪಂದ್ಯಾಟ ಪ್ರೋತ್ಸಾಹಿಸುತ್ತ ಇದೆ,” ಎಂದರು.
ನಿಹಾಲ್ ಸರಿನ್ ದೇಶದ ಚೆಸ್ ರಾಂಕ್ ನಲ್ಲಿ ೩ನೆ ಸ್ಥಾನದ ಆಟವಾಡುತ್ತ ತನ್ನ ೧೪ನೆ ವಯಸ್ಸಿಗೆ ವಿಶ್ವದ ಗಮನ ಸೆಳೆದಿದ್ದಾರೆ.