ಮಂಗಳಮುಖಿಯರು ಎಂದಾಕ್ಷಣ ಮೂಗು ಮುರಿಯುವ ಮಂದಿಯೇ ನಮ್ಮಲ್ಲಿ ಹಲವರು..ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವವನ್ನೂ ಕೊಡದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿಬಿಟ್ಟಿದ್ದಾರೆ. ಆದರೆ ನಿಮಗೆ ಗೊತ್ತಾ..? ಪುರಾಣ ಕಾಲದಲ್ಲಿಯೂ ಕೂಡ ಮಂಗಳಮುಖಿಯರಿಗೆ ಉತ್ತಮ ಸ್ಥಾನ ನೀಡಲಾಗಿತ್ತು, ಶಾಸ್ತ್ರಗಳ ಪ್ರಕಾರ ಮಂಗಳಮುಖಿಯರಿಗೆ ದಾನ ಮಾಡುವುದರಿಂದ ಭಗವಾನ್ ವಿಷ್ಣುವಿನ ಕ್ರಪೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮಂಗಳಮುಖಿಯರಿಗೆ ಯಾವುದನ್ನು ದಾನ ಮಾಡಿದರೆ ಉತ್ತಮ ಎಂಬುದಕ್ಕಿಂತ ಯಾವುದನ್ನು ದಾನ ಮಾಡಬಾರದೆಂಬುದು ಮೊದಲು ತಿಳಿದಿರಬೇಕಾದ ವಿಚಾರ.
ಮನೆಯ ಹಳೆಯ ವಸ್ತುಗಳನ್ನು ಹಾಗು ಬಳಸದ ವಸ್ತುಗಳನ್ನು ದಾನ ಮಾಡುವ ಅಭ್ಯಾಸ ಹಲವು ಮಂದಿಗಿದೆ.ಇದು ಒಳ್ಳೆಯ ಅಭ್ಯಾಸವೇ ಆದರೂ, ಮಂಗಳಮುಖಿಯರಿಗೆ ಯಾವತ್ತೂ ಕೂಡ ಪಾತ್ರೆಗಳನ್ನು ದಾನವಾಗಿ ನೀಡಬೇಡಿ. ಒಂದು ವೇಳೆ ದಾನ ಮಾಡಿದರೆ ನಿಮ್ಮ ಕುಟುಂಬದಲ್ಲಿ ಅಶಾಂತಿ, ಜಗಳ, ಕಲಹಕ್ಕೆ ಕಾರಣವಾಗುತ್ತದೆ. ಹಾಗೆಯೆ ಮನೆಯಲ್ಲಿನ ಪೊರಕೆಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮನೆಗೆ ಬರುವ ಮಂಗಳಮುಖಿಯರಿಗೆ ಇದನ್ನು ನೀಡಬೇಡಿ ಮತ್ತು ಇದನ್ನು ಮಾಡುವುದರಿಂದ ನೀವು ಲಕ್ಷ್ಮಿಯ ವಾಸಸ್ಥಾನವನ್ನು ನಿಮ್ಮ ಮನೆಯಿಂದ ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಮತ್ತು ತೊಂದರೆಯ ಜೀವನವನ್ನು ನಡೆಸಬೇಕಾಗುತ್ತದೆ ಹಾಗೆ ಹಣಕಾಸಿನ ವಿಚಾರದಲ್ಲಿ ಒಮ್ಮೊಮ್ಮೆ ನೀವೂ ಕೂಡ ಎಷ್ಟೇ ಹಣವಿದ್ದರೂ ಒಮ್ಮೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪುವಿರಿ.
ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಶನಿವಾರ ದಿನ ದಾನ ಮಾಡಲಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಮತ್ತು ಇದು ಮನೆಯ ಬಡತನ ಮತ್ತು ದುರದೃಷ್ಟವನ್ನು ತೆಗೆದುಹಾಕುತ್ತದೆ . ಆದರೆ ಮನೆಗೆ ಬರುವ ಮಂಗಳಮುಖಿಯರಿಗೆ ಎಂದಿಗೂ ತೈಲವನ್ನು ದಾನ ಮಾಡಬಾರದು. ಯಾಕೆಂದರೆ ಹೀಗೆ ಮಾಡುವುದರಿಂದ ದುಃಖ ಮತ್ತು ಬಡತನವು ನಿಮ್ಮ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತದೆ. ಒಟ್ಟನಲ್ಲಿ ದಾಣ ಮಾಡಬೇಕು ಎಂಬ ಕಾರಣಕ್ಕೆ ತಿಳಿದೋ ತಿಳಿಯದೆಯೋ ಇಂತಹ ವಸ್ತುಗಳನ್ನು ದಾನ ಮಾಡಿದರೆ ಜೀವನ ಪರ್ಯಂತ ಸಮಸ್ಯೆಗಳಿಗೆ ತುತ್ತಾಗಬೇಕಾದುದು ಅನಿವಾರ್ಯವಾಗುತ್ತದೆ.