ಸಿನಿರಂಗದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ ನಟಿ ಪೂನಂಪಾಂಡೆ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೆಕ್ಸಿಆಂಡ್ ಹಾಟ್ ಆಗಿ ಕಾಣಿಸಿಕೊಳ್ಳೋ ಪೂನಂಪಾಂಡೆ ಸದಾ ಒಂದಲ್ಲೊಂದು ಸುದ್ದಿಮಾಡುತ್ತಲೇ ಇರುತ್ತಾರೆ . ಇದೀಗ ರಾಜ್‍ಕುಂದ್ರಾ ಮೇಲೆ ಆರೋಪ ಹೊರಿಸೋದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಶಿಲ್ಪ ಶೆಟ್ಟಿ ಪತಿ ಉದ್ಯಮಿ ರಾಜ್‍ಕುಂದ್ರಾ ಸಿನಿಮಾ ವಿಷಯದಲ್ಲಾಗಲಿ, ವೈಯಕ್ತಿಕವಾಗಲಿ ಯಾವುದೇ ನಂಟು ಇಲ್ಲ.. ಆದ್ರೆ ಕೆಲದಿನಗಳ ಹಿಂದೆ ಪೂನಂ ಪಾಂಡೆ ರಾಜ್‍ಕುಂದ್ರಾಗೆ ಕರೆ ಮಾಡಿ ತಮ್ಮ ಮೊಬೈಲ್ ಆಪ್‍ನ್ನು ಡೆವಲೆಪ್ ಮಾಡಿಕೊಡುವಂತೆ ಕೇಳಿಕೊಂಡಿದ್ದರಂತೆ . ನಂತರ ತಮ್ಮ ಆದಾಯ ಹಂಚಿಕೆ ವಿಚಾರದಲ್ಲಿ ಹೊಂದಾಣಿಕೆ ಬರದಕಾರಣ ಅದನ್ನು ಮತ್ತೆ ಮುಂದುವರಿಸಲಿಲ್ಲವಂತೆ . ಆನಂತರ ಪೂನಂಪಾಂಡೆಗೆ ಬೆದರಿಕೆ ಕರೆಗಳು ಬರಲು ಶುರುವಾದವಂತೆ ಮಾತ್ರವಲ್ಲ ಕಿರುಕುಳ ನೀಡಲು ಶುರುಮಾಡಿದ್ದಾರೆ ಅನ್ನೋ ಆರೋಪವನ್ನು ಮಾಡಿದ್ದು , ಕ್ರಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಪತ್ನಿ ಶಿಲ್ಪಾಶೆಟ್ಟಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.. ಕೆಲವರು ಪೂನಂ ಪಾಂಡೆ ಪರ ಪ್ರತಿಕ್ರಿಯೆ ನೀಡಿದ್ರೆ , ಇತ್ತ ಕೆಲವರು ರಾಜ್‍ಕುಂದ್ರಾ ಪರ ಮಾತನಾಡುತ್ತಿದ್ದಾರೆ.