ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ರೊಂದಿಗೆ ನಟ ಧ್ರುವಾ ಸರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 2 ದಿನಗಳು ಕಳೆದಿವೆ..ಮದ್ವೆಯ ಮರುದಿನ ಅಂದರೆ ನವೆಂಬರ್ 25ರಂದು ಅಭಿಮಾನಿಗಳಿಗಾಗಿಯೇ ವಿಶೇಷ ಕಾರ್ಯಕ್ರಮವನ್ನು ಧ್ರುವಾ ಹಮ್ಮಿಕೊಂಡಿದ್ದರು. ಅಲ್ಲದೆ ವಿವಾಹ ಸಮಾರಂಭಕ್ಕೆ ಆಗಮಿಸಿ, ಬಿಸಿಲಿನಲ್ಲಿ ಕಾದು ಕುಳಿತು ತಮ್ಮನ್ನ ಹರಸಿದ ಅಭಿಮಾನಿ ದೇವರಿಗೆ ಗೌರವ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು..
ಇದೇ ವೇಳೆ ಮಾತನಾಡಿದ ಧ್ರುವ ಪತ್ನಿ ಪ್ರೇರಣಾ, ಧ್ರುವಾ ಸರ್ಜಾರನ್ನು ವಿವಾಹಿತಳಾಗಿರುವುದಕ್ಕೆ ಸಂತಸವಿದೆ.. ಅವರು ಎಂದಿಗೂ ತನ್ನ ಬಳಿ ಸ್ಟಾರ್ ನಟನಂತೆ ವರ್ತಿಸಿಲ್ಲ..ಬಹಳ ಸಿಂಪಲ್ ಆಗಿಯೇ ಇರುತ್ತಿದ್ದರಿಂದ ಸ್ಟಾರ್ ನಟನ ಪತ್ನಿ ಎಂಬಂತೆ ಅನ್ನಿಸುತ್ತಿಲ್ಲ..ಅವರ ಈ ವ್ಯಕ್ತಿತ್ವವೇ ತನಗೆ ಮೆಚ್ಚುಗೆಯಾಗಿರೋದು ಎಂಬುದಾಗಿ ತಿಳಿಸಿದ್ದಾರೆ.