ಬೆಂಗಳೂರು,ಅ.01: ಬೆಂಗಳೂರಿನ ನೂತನ ಮೇಯರ್ ಆಗಿ ರಾಜಸ್ತಾನ ಮೂಲದ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದು, ಕನ್ನಡಪರ ಹೋರಾಟಗಾರ ಹಾಗೂ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಗೌತಮ್ ಕುಮಾರ್ ಒಬ್ಬ ಮಾರ್ವಾಡಿ. ಮಾರ್ವಾಡಿ ಕೈಗೆ ಬೆಂಗಳೂರು ಹೋಗುತ್ತಿರುವುದು ದುರದೃಷ್ಟಕರ. ಮಾರ್ವಾಡಿ ಬದಲು ಕನ್ನಡಿಗರನ್ನ ಆಯ್ಕೆ ಮಾಡಬೇಕಿತ್ತು. ಆದರೆ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದು, ಬಿಬಿಎಂಪಿ ಅವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಮೇಯರ್, ದೇಶ ಮೊದಲು ಭಾಷೆ ನಂತರ ಎಂಬ ಭಾಔನೆ ನನ್ನಲ್ಲಿದೆ. ನಿಜ ಹೇಳಬೇಕೆಂದರೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ದಲ್ಲಿ ಹುಟ್ಟಿ ಬೆಳೆದವನು ನಾನು..ಕನ್ನಡವನ್ನು ಸ್ಪಷ್ಟವಾಗಿ ಓದೋದಕ್ಕೂ ಬರೆಯೋದಕ್ಕೂ ನನಗೆ ಬರುತ್ತದೆ. ಆದ್ದರಿಂದ ಮಾರ್ವಾಡಿ ಎಂದು ಹೀಗಳೆಯಬೇಕಿಲ್ಲ ಎಂಬುದಾಗಿ ತಿಳಿಸಿದ್ದಾರೆ.