ಮುಂಬೈ: ಮಳೆಗೆ 4 ಬಲಿ

Representative Image (Photo ANI)

ಮುಂಬೈ: ಒಂದು ಕಡೆ ಕೊರೊನಾದಿಂದ ತತ್ತರಿಸಿರುವ ಮಹಾರಾಷ್ಟ್ರಾ ಜನತೆಗೆ ಇದೀಗ ವರುಣನ ಕಾಟ ಕೂಡಾ ಜೋರಾಗಿದ್ದು, ನಿರಂತರವಾಗಿ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಅತೀ ಮಳೆಯಿಂದ ಎರಡು ಕಡೆಗಳಲ್ಲಿ ಕಟ್ಟಡ ಕುಸಿದಿದ್ದು ಘಟನೆಯಲ್ಲಿ 4 ಜನರು ಮೃತಪಟ್ಟಿದ್ದಾರೆ. 17 ಜನರು ಗಾಯಗೊಂಡಿದ್ದಾರೆ.

ಮುಂಬೈನ ಮಲಾಡ್‌ ಪ್ರದೇಶದ ಮಲ್ವಾನಿ ಭಾಗದಲ್ಲಿ ಮನೆಯ ಒಂದು ಭಾಗ ಕುಸಿದಿದ್ದು, ಮನೆಯ ಅವಶೇಷದ ಅಡಿಯಲ್ಲಿ ಸುಮಾರು 17 ಜನ ಸಿಲುಕಿದ್ದರು. ಘಟನೆಯಲ್ಲಿ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಈ ಪೈಕಿ ನಾಲ್ಕು ಜನರಿಗೆ ಗಾಯಗಳಾಗಿವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ 2
ದಕ್ಷಿಣ ಮುಂಬೈನ ಫೋರ್ಟ್​ ಭಾಗದಲ್ಲಿ ಕಟ್ಟಡ ಕುಸಿದ ಪರಿಣಾಮ, ಇಬ್ಬರು ಮೃತಪಟ್ಟಿದ್ದಾರೆ. 14 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪುಣೆ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇನ್ನು, ಮಳೆಯಿಂದ ಈ ಭಾಗದಲ್ಲಿ ಕೃಷಿ ಚುಟುವಟಿಕೆ ಕೂಡ ಚುರುಕುಗೊಂಡಿದೆ.

Exit mobile version