ಕಲಬುರುಗಿ.ಸೆ.18: ಬಿಎಸ್ ಯಡಿಯೂರಪ್ಪನವರು ಕೈಯಲ್ಲಿ ಅಧಿಕಾರವಿದ್ದರೆ ಮಾತ್ರವಲ್ಲ, ಅಧಿಕಾರವಿಲ್ಲದಿದ್ದರೂ ನಮಗೆ ಮುಖ್ಯಮಂತ್ರಿಗಳೇ ಆಗಿರುತ್ತಾರೆ..ಅವರ ಸ್ಥಾನವನ್ನು ಮತ್ತಿನ್ಯಾವ ನಾಯಕನೂ ತುಂಬುವುದು ಸಾಧ್ಯವಿಲ್ಲ..ಕಲ್ಯಾಣ ಕರ್ನಾಟಕ ಉತ್ಸವ, ಮಠ ಮಂದಿರಗಳ ವಿಚಾರದಲ್ಲಿ ಎಂದಿಗೂ ಬಿಎಸ್‍ವೈ ಬೆಂಬಲ ನೀಡಿದ್ದಾರೆ, ಏಳಿಗೆಗೆ ಪ್ರಯತ್ನಿಸಿದ್ದಾರೆ..ಈ ಕಾರಣದಿಂದ ನಮ್ಮ ಮುಖ್ಯಮಂತ್ರಿಗಳ ವಿಚಾರದಲ್ಲಿ ಯಾರಾದರೂ ತೊಂದರೆ ಕೊಡುವುದಕ್ಕೆ ಬಂದರೆ ನಾವ್ಯಾರೂ ಸುಮ್ಮನಿರೋದಿಲ್ಲ, ರಸ್ತೆಗಿಳಿದಾದರೂ ಸರಿ ಅವರ ಬೆಂಬಲಕ್ಕೆ ನಾವಿರುತ್ತೇವೆ ಎಂಬುದಾಗಿ ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಎಚ್ಚರಿಕೆಯ ಮಾತನ್ನಾಡಿದ್ದಾರೆ.
ಕಲಬುರುಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮೀಜಿಗಳು, 2018ರಲ್ಲೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಿತ್ತು..ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕುತಂತ್ರಕ್ಕೆ ಬಲಿಯಾಗಬೇಕಾಯ್ತು..ಇದೀಗ ಮತ್ತೆ ಎಲ್ಲವೂ ತಿಳಿಯಾಗಿದೆ.. ಸತ್ಯಕ್ಕೆ ಜಯ ಸಿಕ್ಕಿದೆ ಎಂಬಂತೆ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಗಳಾಗಿದ್ದಾರೆ..ಖಂಡಿತವಾಗಿಯೂ ಮತ್ತೆ ಮಠ ಮಾನ್ಯಗಳ ಅಭಿವೃಧ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆಂಬ ನಂಬಿಕೆ ನಮಗಿದೆ ಎಂದು ಅವರು ಹೇಳಿದ್ದಾರೆ.